ಯಲ್ಲಾಪುರ: ಬಿ.ಇಡಿ ಎರಡನೇ ವರ್ಷದ 3ನೇ ಸೆಮಿಸ್ಟರ್ ಹಾಗೂ ಪ್ರಥಮ ವರ್ಷದ ಮೊದಲನೇ ಸಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವಿಶ್ವದರ್ಶನ ಶಿಕ್ಷಣ ಸಂಸ್ಥೆ ಶೇ.100ರ ಸಾಧನೆ ಮಾಡಿದೆ. ಎರಡನೇ ವರ್ಷದ 3ನೇ ಸಮಿಸ್ಟರ್ ಪರೀಕ್ಷೆಗೆ 94 ವಿದ್ಯಾರ್ಥಿಗಳು ಹಾಜರಾಗಿದ್ದರು. ಪ್ರಥಮ ವರ್ಷದ ಮೊದಲನೇ ಸಮಿಸ್ಟರ್ ಗೆ 100 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.
ಇದರಲ್ಲಿ ಮಹೇಶ ಭಟ್ಟ 524 ಅಂಕ ಪಡೆದು ಶೇ.87.33, ಹಫಿಜಾಬಿ ಶೇಖ್ 523 ಅಂಕ ಪಡೆದು 87.16, ಸ್ನೇಹಾ ಮರಾಠೆ 520 ಅಂಕ ಪಡೆದು 86.66ರ ಸಾಧನೆ ಮಾಡಿದ್ದಾರೆ. ಬಿ.ಇಡಿ ಪ್ರಥಮ ವರ್ಷದ 1ನೇ ಸಮಿಸ್ಟರ್ ಪರೀಕ್ಷೆಯಲ್ಲಿ ವೀಣಾ ಹೆಗಡೆ 523ಅಂಕ ಪಡೆದು ಶೇ.87.16, ಬೇಬಿ ಆಯಿಷಾ ಶೇಖ್ 521ಅಂಕ ಪಡೆದು 86.83, ನೇತ್ರಾವತಿ ಗೌಡ 517ಅಂಕ ಪಡೆದು ಶೇ.86.16ರ ಸಾಧನೆ ಮಾಡಿದ್ದಾರೆ. ಪ್ರಾಚಾರ್ಯರಾದ ಎಸ್.ಎಲ್ ಭಟ್ಟ, ಶಿಕ್ಷಕರಾದ ಸೀತಾರಾಮ ಗೌಡ, ಬಾಲಚಂದ್ರ ಭಟ್ಟ, ಪೂರ್ಣಿಮಾ ಉಪಾದ್ಯಾಯ, ವೀಣಾ ಭಾಗ್ವತ್, ರವೀಂದ್ರ ಶರ್ಮ ಈ ವಿದ್ಯಾರ್ಥಿಗಳಿಗೆ ಬೋಧಿಸಿದ್ದರು.