ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಮಹಾ ವಿದ್ಯಾಲಯದ (ಬಿ.ಇಡಿ) ವಿದ್ಯಾರ್ಥಿ ಪರಿಷತ್ ನ ಪ್ರಧಾನ ಕಾರ್ಯದರ್ಶಿಯಾಗಿ ತುಕಾರಾಮ ಲಮಾಣಿ ಆಯ್ಕೆಯಾಗಿದ್ದಾರೆ.
ಇದರೊಂದಿಗೆ ಪ್ರಥಮ ವರ್ಷದ ವರ್ಗ ಪ್ರತಿನಿಧಿಯಾಗಿ ಪ್ರವೀಣಕುಮಾರ ಅಗಸರ್, ಸಾಂಸ್ಕೃತಿಕ ಪ್ರತಿನಿಧಿಯಾಗಿ ಕೀರ್ತಿ ಪೂಜಾರಿ, ಸಹ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅನುಷಾ ಕೋಟಾರ್ಕರ, ಕ್ರೀಡಾ ಕಾರ್ಯದರ್ಶಿಯಾಗಿ ಅರ್ಚನಾ ಹೆಗಡೆ, ಸಹ ಕ್ರೀಡಾ ಕಾರ್ಯದರ್ಶಿಯಾಗಿ ಪ್ರಶಾಂತ್ ಅಲ್ವೇಕರ್, ಗ್ರಂಥಾಲಯ ಕಾರ್ಯದರ್ಶಿಯಾಗಿ ಪ್ರಾರ್ಥನಾ ನಾಯ್ಕ, ಸಹ ಗ್ರಂಥಾಲಯ ಕಾರ್ಯದರ್ಶಿಯಾಗಿ ಚೈತ್ರಾ ಪಟಗಾರ್ ಆಯ್ಕೆಯಾದರು. 2022ನೇ ಸಾಲಿನ ಪ್ರಶಿಕ್ಷಣಾರ್ಥಿಗಳ ಚುನಾವಣಾ ಅಧಿಕಾರಿಯಾಗಿ ಸೀತಾರಾಮ ಗೌಡ ಅವರು ಕಾರ್ಯ ನಿರ್ವಹಿಸಿದರು. ವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್.ಎಲ್ ಭಟ್ಟ ಅವರು ಚುನಾಯಿತ ಪ್ರತಿನಿಧಿಗಳಿಗೆ ಅಭಿನಂದಿಸಿ ಜವಾಬ್ದಾರಿಗಳ ಕುರಿತು ತಿಳಿಸಿದರು. ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಅವರು ಆಯ್ಕೆಯಾದರಿಗೆ ಶುಭ ಕೋರಿದರು.