ಬಿ.ಇಡಿ ಫಲಿತಾಂಶ : ಶೇ.100ರ ಸಾಧನೆ ಮಾಡಿದ ವಿಶ್ವದರ್ಶನ

ಯಲ್ಲಾಪುರ: ಕರ್ನಾಟಕ ವಿಶ್ವ ವಿದ್ಯಾಲಯ ನಡೆಸಿದ ಬಿ.ಇಡಿ ನಾಲ್ಕನೇ ಸೆಮಿಸ್ಟರ್ ನ ಅಂತಿಮ ಪರೀಕ್ಷೆಯಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಶೇ. 100ರ ಫಲಿತಾಂಶ ದಾಖಲಿಸಿದೆ.

93 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲರೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಮಹೇಶ ಭಟ್ಟ ಶೇ. 91.5 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಶಂಕ್ರಮ್ಮಾ ಸುರೇಶ ಧರ್ಮಪ್ಪನವರ್ ಹಾಗೂ ಅಕ್ಷತಾ ಭಾಗ್ವಯ್ ಶೇ. 91ರಷ್ಟು ಅಂಕ ಪಡೆದಿದ್ದಾರೆ. ಪ್ರಿಯಾಂಕ ಹುನಗಾ ಶೇ.90.83ರಷ್ಟು ಅಂಕ ಗಳಿಸಿದ್ದಾರೆ. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ, ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಹಾಗೂ ಆಡಳಿತ ಮಂಡಳಿಯವರು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *