ಯಲ್ಲಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ನೀಡುವ ತಾಲೂಕಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕಿ ಪ್ರೇಮಾ ಗಾಂವ್ಕರ್ ಅವರಿಗೆ ಲಭಿಸಿದೆ. ಸೆ. 5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಂದು ಈ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಕಳೆದ 16 ವರ್ಷಗಳಿಂದ ಇವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2019-19 ಹಾಗೂ 2019-20ರಲ್ಲಿ ಆಂಗ್ಲ ಭಾಷೆಯ ಫಲಿತಾಂಶ ಹೆಚ್ಚಳಕ್ಕಾಗಿ ಶ್ರಮಿಸಿದ ಕಾರಣ ಇವರಿಗೆ ಶಿಕ್ಷಣ ಆಯುಕ್ತರ ಕಚೇರಿ ವತಿಯಿಂದ ನೀಡುವ ಡಾ. ಎಚ್.ಎಫ್ ಕಟ್ಟಿಮನಿ ಗೌರವ ಪುರಸ್ಕಾರ ಸಹ ದೊರೆತಿದೆ. ಅಂಕೋಲಾ ತಾಲೂಕಿನ ಆಂದ್ಲೆ ಗ್ರಾಮದವರಾದ ಪ್ರೇಮಾ ಗಾಂವ್ಕರ್ ಅವರು ದಿ.ಬೀರಣ್ಣ ಗಾಂವ್ಕರ್ ಹಾಗೂ ಶಾರದಾ ಅವರ ಪುತ್ರಿ. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಹ ಶಿಕ್ಷಕರು ಇವರಿಗೆ ಅಭಿನಂದಿಸಿದ್ದಾರೆ.