ಯಲ್ಲಾಪುರ: ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಗುರುನಾನಕ್ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಶಿಕ್ಷಕಿ ಡಾ. ಕವಿತಾ ಹೆಬ್ಬಾರ್, ಸಿಖ್ಖರ ಪ್ರಥಮ ಗುರುವಾಗಿದ್ದ ಗುರುನಾನಕ್ ಅವರು ಶಾಂತಪೂರ್ಣ ಸ್ವಭಾವದವರಾಗಿದ್ದರು. ಹೀಗಾಗಿ ಎಲ್ಲಾ ಧರ್ಮೀಯರು ಅವರನ್ನು ಗೌರವಿಸುತ್ತಿದ್ದರು. ಸಮಾನತೆ, ಭ್ರಾತೃತ್ವದ ಸಂಕೇತವಾಗಿ ಅವರು ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು. ಗುರುನಾನಕ್ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಾದ ಪ್ರಥ್ವಿ ಜೋಶಿ, ಅನುಷಾ ಭಟ್ಟ, ಪ್ರಜ್ಞಾ ಮಡಿವಾಳ, ಸಿಮ್ರಾನ್ ಶೇಖ್, ಲಕ್ಷಿö್ಮ ಪಟಗಾರ, ಅಕ್ಷತಾ ಭಾಗ್ವತ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಮುಕ್ತಾ ಶಂಕರ್ ಅವರು ವಹಿಸಿದ್ದರು. ಪ್ರಭಾತ ಭಟ್ಟ ಪ್ರಾರ್ಥಿಸಿದರು. ಚಿನ್ಮಯ ವೈದ್ಯ ಸ್ವಾಗತಿಸಿದರು. ಶ್ಯಾಮಲಾ ಕೆರೆಗದ್ದೆ ಕಾರ್ಯಕ್ರಮ ಸಂಘಟಿಸಿದ್ದರು. ತಸ್ಲೀಮ ಬಾನು ಶೇಖ್ ವಂದಿಸಿದರು.
- 15 Nov
- 2021