ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ನಲ್ಲಿ ಗಮನ ಸೆಳೆದ ಹಿಂದಿ ಹಾಗೂ ಸಂಸ್ಕೃತ ಭಾಷಾ ಸ್ಪರ್ಧೆ

ಯಲ್ಲಾಪುರ: ಇಲ್ಲಿನ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ನಲ್ಲಿ ಹಿಂದಿ ಹಾಗೂ ಸಂಸ್ಕೃತ ಭಾಷೆಗೆ ಸಂಬoಧಿಸಿದoತೆ ಗುರುವಾರ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಭಾಷೆಗೆ ಸಂಬoಧಿಸಿದ ವಿವಿಧ ಮಾದರಿ ಹಾಗೂ ಚಿತ್ರಪಟಗಳು ಗಮನ ಸೆಳೆದವು. ಹಿಂದಿ ಭಾಷಾ ವಿಭಾಗದಿಂದ ಮಾಡಲಾಗಿದ್ದ ಸ್ವಚ್ಛ ಭಾರತ ಅಭಿಯಾನ, ರಸ್ತೆ ಸುರಕ್ಷತಾ ನಿಯಮ ಹಾಗೂ ವ್ಯಾಕರಣಕ್ಕೆ ಸಂಬoಧಿಸಿದ ಚಿತ್ರಪಟಗಳನ್ನು ಮಕ್ಕಳು ಪ್ರದರ್ಶಿಸಿದರು. ಸಂಸ್ಕೃತ ಭಾಷಾ ವಿಭಾಗದ ವಿದ್ಯಾರ್ಥಿಗಳು ಗುರುಕುಲ ಪದ್ದತಿ, ಮಾಹೇಶ್ವರ ಸೂತ್ರಾಣ, ಸಪ್ತಋಷಿಯಂತಹ ಮಾದರಿಗಳನ್ನು ಪ್ರದರ್ಶಿಸಿದರು. ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಅವರು ಪ್ರದರ್ಶನಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾರದಾಂಬಾ ಪಾಠಶಾಲೆಯ ಶಿಕ್ಷಕರಾದ ನರಸಿಂಹ ಭಟ್ಟ, ಮುರಾರ್ಜಿ ಶಾಲೆಯ ಶಿಕ್ಷಕರಾದ ಸಂಜಯ ನಾಯಕ ಹಾಗೂ ಸಂಸ್ಥೆಯ ಶಿಕ್ಷಕರಾದ ಖೈರೋನ್ ಶೇಖ, ಮಮತಾಜ ಶೇಖ, ಮುಕ್ತಾ ಶಂಕರ್, ಮೇಧಾ ಭಟ್ಟ, ನರಸಿಂಹ ಭಟ್ಟ ನಿರ್ಣಾಯಕರಾಗಿ ಆಗಮಿಸಿದ್ದರು. ಸಂಸ್ಥೆಯ ಉಪ ಪ್ರಾಚಾರ್ಯರಾದ ಆಸ್ಮಾ ಶೇಖ್ ಕಾರ್ಯಕ್ರಮದಲ್ಲಿದ್ದರು. ಮುಬಿನಾ ಶೇಖ್ ಸ್ವಾಗತಿಸಿದರು. ಪ್ರಾಚಾರ್ಯರಾದ ಗಣೇಶ ಭಟ್ಟ ವಂದಿಸಿದರು.

Leave a Reply

Your email address will not be published. Required fields are marked *