ಇಡಗುಂದಿಯಲ್ಲಿ ಧ್ಯಾನ ಶಿಬಿರ

ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ವಿಶ್ವದರ್ಶನ ಸೇವಾ ವತಿಯಿಂದ ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಧ್ಯಾನ ಶಿಬಿರ ನಡೆಯುತ್ತಿದೆ.
    ಭಾನುವಾರ ಸಂಜೆಯಿoದ ಈ ಶಿಬಿರ ಶುರುವಾಗಿದೆ. ಬೆಂಗಳೂರಿನ ಮಹರ್ಷಿ ವೇದ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರಾದ ಅನಂತ ಭಟ್ಟ ಶೀಗೇಪಾಲ್ ಅವರು ಧ್ಯಾನ ತರಬೇತಿ ನೀಡುತ್ತಿದ್ದಾರೆ. ಐದು ದಿನಗಳ ಕಾಲ ಸಂಜೆ 5.30ರಿಂದ 7.30ರ ವರೆಗೆ ಧ್ಯಾನ ಶಿಬಿರ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಇಡಗುಂದಿ ಸೇವಾ ಸಹಕಾರಿ ಸಂಘದ ನಿರ್ದೇಶಿಕರಾದ ಪ್ರೇಮಾನಂದ ನಾಯ್ಕ ಮಾತನಾಡಿ, ಮಾನಸಿಕ ನೆಮ್ಮದಿಗೆ ಧ್ಯಾನ ಅತೀ ಮುಖ್ಯವಾಗಿದೆ ಎಂದು ಹೇಳಿದರು. ಸಾಮಾಜಿಕ ಕಾರ್ಯಕರ್ತರಾದ ವೆಂಕಟ್ರಮಣ ಬೆಳ್ಳಿ ಮಾತನಾಡಿ, ವಿಶ್ವದರ್ಶನ ಸೇವಾ ವತಿಯಿಂದ ಈಗಾಗಲೇ ಹಲವು ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಗ್ರಾಮೀಣ ಭಾಗದಲ್ಲಿ ಶಿಬಿರ ಆಯೋಜಿಸಿರುವುದರಿಂದ ಸ್ಥಳೀಯರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದರು. ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ರಾಜೀವಿ ನಾಯ್ಕ ಹಾಜರಿದ್ದರು. ವಿ.ಕೆ ಗಾಂವ್ಕರ್ ನಿರ್ವಹಿಸಿದರು.

Leave a Reply

Your email address will not be published. Required fields are marked *