
ಅಂಕೋಲಾ: ಲಾಕ್ ಡೌನ್ ಅವದಿಯೂ ಅನೇಕರ ಮಾನಸಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಹೊನ್ನಾವರದ ಎಂ.ಎಸ್.ಸಿ ಇನ್ ಸೈಕಿಯಾಟ್ರಿಕ್ ಸೆಂಟ್ ಇಗ್ನೆಷಿಯಸ್ ಇನ್ಸಿಟ್ಯುಟ್ ಆಫ್ ಹೆಲ್ತ್ ಸೈನ್ಸ್ ನ ಉಪನ್ಯಾಸಕರಾದ ಸ್ಮಿತಾ ಫೆರ್ನಾಂಡೆಸ್ ಹೇಳಿದರು.
ತಾಲೂಕಿನ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ನಲ್ಲಿ ಮಂಗಳವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೋವಿಡ್ ಆತಂಕದ ಕಾರಣದಿಂದ ಅನೇಕರು ಮಾನಸಿಕವಾಗಿ ಕುಗ್ಗಿದ್ದಾರೆ. ಲಾಕ್ ಡೌನ್ ಅವದಿಯಲ್ಲಿ ನಿತ್ಯದ ಚಟುವಟಿಕೆಗಳಿಂದ ದೂರ ಸರಿದವರು ಮಾನಸಿಕವಾಗಿ ಬಳಲುತ್ತಿದ್ದಾರೆ. ಪ್ರತಿ ದಿನ ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಮಾಡುವ ಮೂಲಕ ಅವರು ಮೊದಲಿನಂತೆ ಚಟುವಟಿಕೆಯ ಜೀವನ ನಡೆಸಬಹುದಾಗಿದೆ ಎಂದು ಅವರು ಹೇಳಿದರು. ಪ್ರತಿಯೊಬ್ಬರು ಆತಂಕ ರಹಿತ ಜೀವನಶೈಲಿಯನ್ನು ಬೆಳಸಿಕೊಳ್ಳಬೇಕು. ನಕಾರಾತ್ಮಕ ಚಿಂತನೆಗಳಿAದ ದೂರವಿರಬೇಕು. ಇತರರಿಗೆ ಸಹಾಯ ಮಾಡುವ ಮನೋಧರ್ಮವನ್ನು ಬೆಳಸಿಕೊಳ್ಳಬೇಕು. ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಲು ವಿದ್ಯಾರ್ಥಿಗಳು ಸಮಾಧಾನಯುತ ಜೀವನಶೈಲಿ ರೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಚಾರ್ಯರಾದ ಶಂಕರಗೌಡ ಕಡೆಮನೆ ಉದ್ಘಾಟಿಸಿದರು. ಉಪ ಪ್ರಾಚಾರ್ಯರಾದ ದೀಪಾಲಿ ಕುರ್ಡೇಕರ್ ಅಧ್ಯಕ್ಷತೆ ವಹಿಸಿದ್ದರು. ನಯನಾ ತಾಂಡೇಲ್ ನಿರ್ವಹಿಸಿದರು. ರಶ್ಮಿ ನಾಯಕ ವಂದಿಸಿದರು.