ಯಲ್ಲಾಪುರ: ಅಡಿಕೆ ವರ್ತಕರ ಸಂಘ, ಭಾರತ ಸೇವಾದಳ ಹಾಗೂ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ವತಿಯಿಂದ ಪಟ್ಟಣದ ಎ.ಪಿ.ಎಂ.ಸಿ ಆವಾರದಲ್ಲಿರುವ ಅಡಿಕೆ ವರ್ತಕರ ಸಭಾ ಭವನದಲ್ಲಿ ಫೆ. 26ರಂದು ಬೆಳಗ್ಗೆ 10 ಗಂಟೆಗೆ ಸಿ.ಬಿ.ಎಸ್.ಇ ಹಾಗೂ ಎನ್.ಇ.ಪಿ ಕುರಿತು ಅರಿವು ಶಿಬಿರ ನಡೆಯಲಿದೆ.
ದಾಂಡೇಲಿಯ ಬಂಗೂರ ನಗರ ಡಿಗ್ರಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಆರ್.ಜಿ ಹೆಗಡೆ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ “ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬೆಳಗಾವಿಯ ಕೆ.ಎಲ್.ಇ ಸ್ಕೂಲ್ ನ ಪ್ರಾಧ್ಯಾಪಕರಾದ ಪ್ರೋ. ಪ್ರವೀಣ ಚಂದಿಲ್ಕರ್ ಅವರು “ಸಿ.ಬಿ.ಎಸ್.ಇ ಪಠ್ಯಕ್ರಮದ ಪ್ರಾಮುಖ್ಯತೆ” ಕುರಿತು ಮಾತನಾಡಲಿದ್ದಾರೆ. ಅಡಿಕೆ ವರ್ತಕರ ಸಂಘದ ಅಧ್ಯಕ್ಷರಾದ ರವಿ ವಿ ಹೆಗಡೆ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಧರ ಶೆಟ್ಟಿ, ಮಾತೃ ಮಂಡಳಿ ಅಧ್ಯಕ್ಷರಾದ ರಮಾ ದೀಕ್ಷಿತ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.