ಮಾತೆಯರ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದ ಚಿಣ್ಣರು

ಯಲ್ಲಾಪುರ: ನಾಯ್ಕನಕೆರೆಯ ಶಾರದಾಂಬಾ ಸಭಾ ಭವನದಲ್ಲಿ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ವತಿಯಿಂದ ಹಮ್ಮಿಕೊಂಡ ಬೇಸಿಗೆ ಶಿಬಿರದಲ್ಲಿ ಚಿಣ್ಣರು ಮಾತೆಯ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದರು.
ಮಾತೃ ವಂದನ ಕಾರ್ಯಕ್ರಮಕ್ಕೆ ಆಗಮಿಸಿದ ಮಾತೆಯರನ್ನು ಸಂಸ್ಥೆಯವರು ಪೂರ್ಣಕುಂಭದೊoದಿಗೆ ಸ್ವಾಗತಿಸಿದರು. ನಂತರ ಮಕ್ಕಳು ವ್ಯಾಯಾಮ ಅಭ್ಯಾಸ ನಡೆಸಿದರು. ಇದಾದ ಮೇಲೆ ಶ್ಲೋಕ ಪಠಣ ಮಾಡಿ, ತಾಯಿಯ ಪಾದಪೂಜೆ ಮಾಡಿದರು. ಸಭಾ ಕಾರ್ಯಕ್ರಮವನ್ನು ಟಿ.ಎನ್ ಭಟ್ಟ ನಡಿಗೆಮನೆ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಕ್ಕಳು ಶಿಬಿರ ಗೀತೆಯನ್ನು ಪ್ರಸ್ತುತ ಪಡಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ನೃತ್ಯ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಅವರು ಈ ವೇಳೆ ಹಾಜರಿದ್ದರು. ವನಿತಾ ಗುಮ್ಮಾನಿ ಅವರು ಕವನ ವಾಚಿಸಿ, ತಾಯಿಯ ಮಹತ್ವದ ಕುರಿತು ವಿವರಿಸಿದರು. ಪ್ರತಿಮಾ ಭಟ್ಟ ಅವರು ಸಂಸ್ಕೃತ ಪಠಣ ಮಾಡಿಸಿದರು. ನರಸಿಂಹ ಭಟ್ಟ ಅವರು ಶ್ಲೋಕಗಳನ್ನು ಹೇಳಿಕೊಟ್ಟರು.

Leave a Reply

Your email address will not be published. Required fields are marked *