Archives: News

ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ಕಲಿಸುವಿಕೆ ಅಗತ್ಯ

ಯಲ್ಲಾಪುರ: ಸ್ಪಷ್ಟತೆ, ಸ್ವಾಭಿಮಾನ ಹಾಗೂ ಆತ್ಮ ವಿಶ್ವಾಸ ಮೂಡಿಸುವ ಜೀವನ ಶಿಕ್ಷಣ ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂದು ವೈ.ಟಿ.ಎಸ್.ಎಸ್.ನ ನಿವೃತ್ತ ಪ್ರಾಚಾರ್ಯ, ಚಿಂತಕ ಬೀರಣ್ಣ ನಾಯಕ ಮೊಗಟಾ ಹೇಳಿದರು.   ಅವರು ಮಂಗಳವಾರ  ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ವತಿಯಿಂದ ನಡೆದ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.     ಶಿಬಿರಗಳು ಮಕ್ಕಳಿಗೆ ಅಪಾರವಾದ ಜೀವನಾನುಭವ, ಜ್ಞಾನ ಸಂಪಾದನೆ ಹಾಗೂ ಸ್ವಾಭಿಮಾನವನ್ನು ಕಲಿಸುತ್ತದೆ. ಭಯೋತ್ಪಾದನೆ, ಭೃಷ್ಟಾಚಾರಕ್ಕಿಂತಲೂ ದೊಡ್ಡ ಅಪಾಯಗಳನ್ನು ಎದುರಿಸುವ ಶಕ್ತಿ ಸ್ವಾಭಿಮಾನದಿಂದ ದೊರೆಯುತ್ತದೆ. ಲಾಕ್ ಡೌನ್ ಅವದಿಯಲ್ಲಿ…

Read More

S.S.L.C ವಿದ್ಯಾರ್ಥಿಗಳೇ. . . ನಿಮ್ಮ ಭವಿಷ್ಯದ ದಾರಿ ತೋರಲಿದೆ ವಿಶ್ವದರ್ಶನ…

ಯಲ್ಲಾಪುರ: ವಿಶ್ವದರ್ಶನ ಪಿ.ಯು ಕಾಲೇಜು ಹಾಗೂ ವಿಶ್ವದರ್ಶನ ಕರಿಯರ್ ಅಕಾಡೆಮಿ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ “ಎಸ್.ಎಸ್.ಎಲ್.ಸಿ ನಂತರ ಮುಂದೇನು?” ಎಂಬ ವಿಶೇಷ ಕಾರ್ಯಕ್ರಮವನ್ನು ಏಪ್ರಿಲ್ 13ರಂದು ಬೆಳಗ್ಗೆ 10ಗಂಟೆಗೆ ಸಂಸ್ಥೆಯ ಆವಾರದಲ್ಲಿ ಹಮ್ಮಿಕೊಳ್ಳಲಾಗಿದೆ.ವೈ.ಟಿ.ಎಸ್.ಎಸ್ ನ ವಿಶ್ರಾಂತ ಪ್ರಾಚಾರ್ಯ ಶ್ರೀರಂಗ ಕಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಶಿರಸಿಯ ಇಕ್ರಾ ಪ.ಪೂ ಕಾಲೇಜಿನ ಪ್ರಾಚಾರ್ಯರಾದ ರವೀಂದ್ರ ಹೆಗಡೆ ಅವರು ಶೈಕ್ಷಣಿಕ ಮಾರ್ಗದರ್ಶನ ನೀಡಲಿದ್ದಾರೆ. ವಿಶ್ವದರ್ಶನ ಪಿ.ಯು ಕಾಲೇಜಿನ ಪ್ರಾಚಾರ್ಯರಾದ ಡಾ….

Read More

ಯಶಸ್ಸು ಕಂಡ ಉದ್ಯೋಗ ಮೇಳ

ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಮಹಾ ವಿದ್ಯಾಲಯದ ವತಿಯಿಂದ ಸಂಸ್ಥೆಯ ಆವಾರದಲ್ಲಿ ಭಾನುವಾರ ನಡೆದ ಶಿಕ್ಷಕರ ಉದ್ಯೋಗ ಮೇಳ 36 ಅಭ್ಯರ್ಥಿಗಳಿಗೆ ನೇರವಾಗಿ ಉದ್ಯೋಗ ಒದಗಿಸಲಾಗಿದೆ.ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ 8ಕ್ಕೂ ಅಧಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಉದ್ಯೋಗ ಮೇಳಕ್ಕೆ ಆಗಮಿಸಿ ಅಭ್ಯರ್ಥಿಗಳ ಸಂದರ್ಶನ ಮಾಡಿದರು. ಅಭ್ಯರ್ಥಿಗಳು ತಮ್ಮ ಇಷ್ಟದ ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆಯ ಮೇರೆಗೆ ಸಂದರ್ಶನಕ್ಕೆ ಹಾಜರಾದರು. ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳು ತಮಗೆ ಅರ್ಹ ಎನಿಸಿದ ಅಭ್ಯರ್ಥಿಗಳನ್ನು…

Read More

ಮಾತೆಯರ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದ ಚಿಣ್ಣರು

ಯಲ್ಲಾಪುರ: ನಾಯ್ಕನಕೆರೆಯ ಶಾರದಾಂಬಾ ಸಭಾ ಭವನದಲ್ಲಿ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ವತಿಯಿಂದ ಹಮ್ಮಿಕೊಂಡ ಬೇಸಿಗೆ ಶಿಬಿರದಲ್ಲಿ ಚಿಣ್ಣರು ಮಾತೆಯ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದರು.ಮಾತೃ ವಂದನ ಕಾರ್ಯಕ್ರಮಕ್ಕೆ ಆಗಮಿಸಿದ ಮಾತೆಯರನ್ನು ಸಂಸ್ಥೆಯವರು ಪೂರ್ಣಕುಂಭದೊoದಿಗೆ ಸ್ವಾಗತಿಸಿದರು. ನಂತರ ಮಕ್ಕಳು ವ್ಯಾಯಾಮ ಅಭ್ಯಾಸ ನಡೆಸಿದರು. ಇದಾದ ಮೇಲೆ ಶ್ಲೋಕ ಪಠಣ ಮಾಡಿ, ತಾಯಿಯ ಪಾದಪೂಜೆ ಮಾಡಿದರು. ಸಭಾ ಕಾರ್ಯಕ್ರಮವನ್ನು ಟಿ.ಎನ್ ಭಟ್ಟ ನಡಿಗೆಮನೆ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಕ್ಕಳು ಶಿಬಿರ ಗೀತೆಯನ್ನು ಪ್ರಸ್ತುತ ಪಡಿಸಿದರು. ಸಭಾ…

Read More

ಬೇಸಿಗೆ ಶಿಬಿರದಲ್ಲಿ ವನ್ಯಜೀವಿ ಪರಿಚಯ: ಹಾವುಗಳ ಮಹತ್ವದ ಬಗ್ಗೆ ಸಾರಿದ ಉರಗ ತಜ್ಞ

ಯಲ್ಲಾಪುರ: ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ವತಿಯಿಂದ ನಾಯ್ಕನಕೆರೆ ಶಾರದಾಂಬಾ ಸಭಾ ಭವನದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉರಗ ತಜ್ಞ ಅಕ್ಬರ್ ಶೇಕ್ ವಿವಿಧ ಹಾವುಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು.ಹಾವುಗಳ ಜೀವನ ಶೈಲಿ, ಹಾವುಗಳಲ್ಲಿನ ವೈವಿಧ್ಯತೆ, ಅಪಾಯಕಾರಿ ಹಾಗೂ ಅಪಾಯಕಾರಿ ಅಲ್ಲದ ಹಾವುಗಳ ಬಗ್ಗೆ ಅವರು ಚಿತ್ರಗಳ ಸಮೇತ ವಿವರಿಸಿದರು. ಈ ಸಭಾ ಕಾರ್ಯಕ್ರಮವನ್ನು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಮುಕ್ತಾ ಶಂಕರ್ ಅವರು ಉದ್ಘಾಟಿಸಿದರು. ಅರಣ್ಯಾಧಿಕಾರಿ ಪ್ರಶಾಂತ ಅವರು ಹಾಜರಿದ್ದು,…

Read More

ಏ.3 ರಂದು ವಿಶ್ವದರ್ಶನ ಆವಾರದಲ್ಲಿ ಉದ್ಯೋಗ ಮೇಳ

ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಮಹಾ ವಿದ್ಯಾಲಯದ ವತಿಯಿಂದ ಏಪ್ರಿಲ್ 3 ರಂದು ಶಿಕ್ಷಕರಿಗಾಗಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.   ವಿಶ್ವದರ್ಶನ ಪದವಿ ಪೂರ್ವ ವಿದ್ಯಾಲಯ, ವಿಶ್ವದರ್ಶನ ಕೇಂದ್ರಿಯ ವಿದ್ಯಾಲಯವನ್ನು ಒಳಗೊಂಡoತೆ ರಾಜ್ಯದ  8 ವಿದ್ಯಾಸಂಸ್ಥೆಯ ಮುಖ್ಯಸ್ಥರು ಆಗಮಿಸಿ ಅಭ್ಯರ್ಥಿಗಳ ಸಂದರ್ಶನ ಮಾಡಲಿದ್ದಾರೆ. ಅಭ್ಯರ್ಥಿಗಳು ಸೂಕ್ತ ದಾಖಲಾತಿಗಳೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದ್ದು, ಆಸಕ್ತರು 7337875279ಮೂಲಕ ಹೆಸರು ನೋಂದಾಯಿಸುವoತೆ ಪ್ರಕಟಣೆ ತಿಳಿಸಿದೆ.

Read More

ಶಾರದಾಂಬಾ ಭವನದಲ್ಲಿ ಬೇಸಿಗೆ ಶಿಬಿರ

ಯಲ್ಲಾಪುರ: ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ವತಿಯಿಂದ ಇದೇ ಮೊದಲ ಬಾರಿಗೆ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.    ಸೋಮವಾರ ನಾಯ್ಕನಕೆರೆಯ ಶಾರದಾಂಬಾ ದೇವಾಲಯ ಸಭಾ ಭವನದಲ್ಲಿ ಶಾರದಾಂಬಾ ದೇವಸ್ಥಾನದ ಅಧ್ಯಕ್ಷರಾದ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರು ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಸಾಧನೆ ಮಾಡಲು ಪ್ರಯತ್ನಿಸಬೇಕು. ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಬಗ್ಗೆ ಯೋಚಿಸಬೇಕು. ಶಿಬಿರದಲ್ಲಿ ವೈವಿಧ್ಯಮಯ ಮಾಹಿತಿ, ಶಿಕ್ಷಣ ಹಾಗೂ ತರಬೇತಿ ನೀಡಲಾಗುತ್ತದೆ. ಇದರ ಪ್ರಯೋಜನ…

Read More

ಬಿ.ಇಡಿ ಫಲಿತಾಂಶ : ಶೇ.100ರ ಸಾಧನೆ ಮಾಡಿದ ವಿಶ್ವದರ್ಶನ

ಯಲ್ಲಾಪುರ: ಕರ್ನಾಟಕ ವಿಶ್ವ ವಿದ್ಯಾಲಯ ನಡೆಸಿದ ಬಿ.ಇಡಿ ನಾಲ್ಕನೇ ಸೆಮಿಸ್ಟರ್ ನ ಅಂತಿಮ ಪರೀಕ್ಷೆಯಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಶೇ. 100ರ ಫಲಿತಾಂಶ ದಾಖಲಿಸಿದೆ. 93 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲರೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಮಹೇಶ ಭಟ್ಟ ಶೇ. 91.5 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಶಂಕ್ರಮ್ಮಾ ಸುರೇಶ ಧರ್ಮಪ್ಪನವರ್ ಹಾಗೂ ಅಕ್ಷತಾ ಭಾಗ್ವಯ್ ಶೇ. 91ರಷ್ಟು ಅಂಕ ಪಡೆದಿದ್ದಾರೆ. ಪ್ರಿಯಾಂಕ ಹುನಗಾ ಶೇ.90.83ರಷ್ಟು ಅಂಕ ಗಳಿಸಿದ್ದಾರೆ. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ…

Read More

ಶಿಸ್ತು ಹಾಗೂ ಸಮಯ ಪಾಲನೆಯಿಂದ ಉತ್ತಮ ಅಂಕಗಳಿಕೆ ಸಾಧ್ಯ

ಯಲ್ಲಾಪುರ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನೇರ ಉತ್ತರ, ಉತ್ತಮ ಕೈ ಬರಹ ಹಾಗೂ ಸಮಯ ಪಾಲನೆಗೆ ಮಹತ್ವ ಕೊಡಬೇಕು ಎಂದು ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿಗಳಾದ ಷಣ್ಮುಖ ಹೆಗಡೆ ಅವರು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಆವಾರದಲ್ಲಿ ಶುಕ್ರವಾರ ನಡೆದ “ಪ್ರೇರಣಾ ಶಿಬಿರ”ವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಪರೀಕ್ಷೆ ಬರೆಯಯವ ಮುನ್ನ ವಿದ್ಯಾರ್ಥಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಪರೀಕ್ಷೆಗೆ ಇನ್ನೂ ಸಾಕಷ್ಟು ಸಮಯಾವಕಾಶವಿದೆ. ಹೀಗಾಗಿ ಅಗತ್ಯ ಪೂರ್ವ ತಯಾರಿ ಶುರು ಮಾಡಬೇಕು. ಯಾವ…

Read More

ನಾಯಕತ್ವ ಗುಣ, ನಂಬಿಕೆ, ಆತ್ಮ ವಿಶ್ವಾಸ ಹಾಗೂ ಉತ್ತಮ ಹವ್ಯಾಸಗಳಿಂದ ಸಾಧನೆ ಸಾಧ್ಯ

ಯಲ್ಲಾಪುರ: ಜೀವನದ ಅನೇಕ ಪ್ರಶ್ನೆಗಳಿಗೆ ಭಗವದ್ಗೀತೆ ಉತ್ತರ ಕೊಡುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮನೀಶ್ ನಾಯಕ್ ಅವರು ಹೇಳಿದರು.ಅವರು ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವದರ್ಶನ ಕರಿಯರ್ ಅಕಾಡೆಮಿ ವತಿಯಿಂದ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.ಪುಸ್ತಕಗಳನ್ನು ಓದುವುದರಿಂದ ಜೀವನದ ಆಯಾಮಗಳು ಬದಲಾಗುತ್ತದೆ. ಪ್ರತಿಯೊಬ್ಬರಿಗೂ ಅಗತ್ಯವಿರುವ ಕೌಶಲ್ಯ, ವ್ಯಕ್ತಿತ್ವ ನಿರ್ಮಾಣ ಸಂಘಟನೆ ಹಾಗೂ ನಾಯಕತ್ವ ಗುಣಗಳು ಪುಸ್ತಕ…

Read More