Archives: News

90ಕ್ಕೂ ಅಧಿಕ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದ ವಿಶ್ವದರ್ಶನದ ವಿದ್ಯಾರ್ಥಿಗಳು

ಯಲ್ಲಾಪುರ: ವಿಜ್ಞಾನ ದಿನಾಚರಣೆ ಅಂಗವಾಗಿ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ ವಿಜ್ಞಾನ ಪ್ರದರ್ಶನ ಹಾಗೂ ಸ್ಪರ್ಧೆ ನೋಡುಗರ ಗಮನ ಸೆಳೆಯಿತು.ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ 90ಕ್ಕೂ ಅಧಿಕ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಾಯಿತು. ಚಂದ್ರಯಾನ, ರಾಕೇಟ್ ನ ಮಾದರಿ, ವಿದ್ಯುತ್ ಶಕ್ತಿಯಾಗಿ ಬದಲಾಗುವ ಚಲನ ಶಕ್ತಿ, ಜ್ವಾಲಾಮುಖಿ ಮಾದರಿ, ವಕ್ರಿಭವನ ಮೊದಲಾದ ಮಾದರಿಗಳು ನಿರ್ಣಾಯಕರ ಮೆಚ್ಚುಗೆ ಪಡೆದವು. ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಅವರು ಮಾದರಿಗಳನ್ನು ಪರಿಶೀಲಿಸಿದರು. ನಂದೂಳ್ಳಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ನಿತೇಶ್…

Read More

ಕೃಷಿ ಕಾಯಕ ಅರಿತ ವಿಶ್ವದರ್ಶನದ ಮಕ್ಕಳು

ಯಲ್ಲಾಪುರ: ಗ್ರಾಮೀಣ ಭಾಗದ ಕೃಷಿ ಹಾಗೂ ತೋಟಗಾರಿಕಾ ಪ್ರದೇಶಗಳಿಗೆ ತೆರಳಿದ ವಿಶ್ವದರ್ಶನ ಸೇವಾ ರೆಜಿಮೆಂಟ್ ನ 42 ವಿದ್ಯಾರ್ಥಿಗಳು ಅಲ್ಲಿನ ರೈತರನ್ನು ಭೇಟಿ ಮಾಡಿ ಕೃಷಿ ಕಾಯಕದ ಬಗ್ಗೆ ಮಾಹಿತಿ ಪಡೆದರು.ಆನಗೋಡನ ಹಸ್ತಪಾಲಿನ ಕಬ್ಬಿನ ಗದ್ದೆಗೆ ತೆರಳಿ ಕಬ್ಬು ಬೆಳೆಯುವ ವಿಧಾನ, ಕಬ್ಬು ಸಂಸ್ಕರಣೆಯ ಪದ್ಧತಿಗಳ ಬಗ್ಗೆ ಅರಿತುಕೊಂಡರು. ಕೃಷಿಕ ಗಣಪತಿ ಭಟ್ಟ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ನಂತರ ಆಲೆಮನೆಗೆ ಭೇಟಿ ನೀಡಿ ಕಬ್ಬಿನ ಹಾಲನ್ನು ಬೆಲ್ಲ ಮಾಡುವ ಪ್ರಕ್ರಿಯೆಯನ್ನು ಗಮನಿಸಿದರು. ಕಬ್ಬಿನ ಗಾಣ, ಆಧುನಿಕ…

Read More

ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ನಲ್ಲಿ ಗಮನ ಸೆಳೆದ ಹಿಂದಿ ಹಾಗೂ ಸಂಸ್ಕೃತ ಭಾಷಾ ಸ್ಪರ್ಧೆ

ಯಲ್ಲಾಪುರ: ಇಲ್ಲಿನ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ನಲ್ಲಿ ಹಿಂದಿ ಹಾಗೂ ಸಂಸ್ಕೃತ ಭಾಷೆಗೆ ಸಂಬoಧಿಸಿದoತೆ ಗುರುವಾರ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.ಭಾಷೆಗೆ ಸಂಬoಧಿಸಿದ ವಿವಿಧ ಮಾದರಿ ಹಾಗೂ ಚಿತ್ರಪಟಗಳು ಗಮನ ಸೆಳೆದವು. ಹಿಂದಿ ಭಾಷಾ ವಿಭಾಗದಿಂದ ಮಾಡಲಾಗಿದ್ದ ಸ್ವಚ್ಛ ಭಾರತ ಅಭಿಯಾನ, ರಸ್ತೆ ಸುರಕ್ಷತಾ ನಿಯಮ ಹಾಗೂ ವ್ಯಾಕರಣಕ್ಕೆ ಸಂಬoಧಿಸಿದ ಚಿತ್ರಪಟಗಳನ್ನು ಮಕ್ಕಳು ಪ್ರದರ್ಶಿಸಿದರು. ಸಂಸ್ಕೃತ ಭಾಷಾ ವಿಭಾಗದ ವಿದ್ಯಾರ್ಥಿಗಳು ಗುರುಕುಲ ಪದ್ದತಿ, ಮಾಹೇಶ್ವರ ಸೂತ್ರಾಣ, ಸಪ್ತಋಷಿಯಂತಹ ಮಾದರಿಗಳನ್ನು ಪ್ರದರ್ಶಿಸಿದರು. ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ…

Read More

ಇಡಗುಂದಿ ವಿಶ್ವದರ್ಶನ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ

ಯಲ್ಲಾಪುರ: ವಿಜ್ಞಾನ ದಿನದ ಅಂಗವಾಗಿ ಸೋಮವಾರ ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ವಿಜ್ಞಾನ ದಿನಾಚರಣೆ ನಡೆಯಿತು.ಶಿಕ್ಷಕರಾದ ವಿಶ್ವೇಶ್ವರ ಗಾಂವ್ಕರ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರಾಚಿನ ಕಾಲದಿಂದ ರೂಢಿಯಲ್ಲಿರುವ ಸಂಪ್ರದಾಯಗಳೆಲ್ಲವೂ ವೈಜ್ಞಾನಿಕ ಆಧಾರಗಳನ್ನು ಹೊಂದಿದೆ. ಈಗಿನ ತಲೆಮಾರಿನವರು ಅವುಗಳ ಕುರಿತು ಅರಿವು ಹೊಂದಬೇಕು ಎಂದರು. ಇನ್ನೋರ್ವ ಶಿಕ್ಷಕರಾದ ರಾಘವೇಂದ್ರ ಹೆಗಡೆ ಅವರು ಮಾತನಾಡಿ, ಭೂಮಿಯ ಮೇಲೆ ನಡೆಯುವ ಪ್ರತಿ ಘಟನೆಗೂ ವೈಜ್ಞಾನಿಕ ಕಾರಣಗಳಿವೆ. ವಿಜ್ಞಾನದ ಆವಿಷ್ಕಾರಗಳೇ ಬದುಕಿನ ರೀತಿಯನ್ನು ಬದಲಾಯಿಸಿದೆ ಎಂದು ಹೇಳಿದರು. ಶಿಕ್ಷಕರಾದ ನವಿನಾ…

Read More

ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಯಲ್ಲಾಪುರ: ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ವತಿಯಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.ಉಲ್ಟಾ ಮಗ್ಗಿ ಹೇಳುವ ಸ್ಪರ್ಧೆ, ಗಣಿತ ಲೆಕ್ಕ ಬಿಡಿಸುವ ಸ್ಪರ್ಧೆ ಹಾಗೂ ಚಿತ್ರಪಟ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಈ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಸ್ಪರ್ಧಾ ವಿಜೇತರಿಗೆ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಹಾಗೂ ವಿಶ್ವದರ್ಶನ ಸೆಂಟ್ರಲ್ ಸ್ಕಲ್ ನ ಪ್ರಾಚಾರ್ಯರಾದ ಗಣೇಶ ಭಟ್ಟ ಅವರು ಬಹುಮಾನ ವಿತರಿಸಿದರು.

Read More

ಸಿ.ಬಿ.ಎಸ್.ಇ ಹಾಗೂ ಎನ್.ಇ.ಪಿಯಿಂದ ಮಕ್ಕಳ ಸಮಗ್ರ ಅಭಿವೃದ್ಧಿ ಸಾಧ್ಯ

ಯಲ್ಲಾಪುರ: ಮಕ್ಕಳ ಸಮಗ್ರ ಅಭಿವೃದ್ಧಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಸಿ.ಬಿ.ಎಸ್.ಇ ಶಿಕ್ಷಣ ಪದ್ದತಿ ಪೂರಕವಾಗಿದೆ ಎಂದು ಶಿಕ್ಷಣ ತಜ್ಣರು ಅಭಿಪ್ರಾಯ ಪಟ್ಟಿದ್ದಾರೆ.    ಪಟ್ಟಣದ ಅಡಿಕೆ ಭವನದಲ್ಲಿ ಶನಿವಾರ ಅಡಿಕೆ ವರ್ತಕರ ಸಂಘ, ಭಾರತ ಸೇವಾದಳ ಹಾಗೂ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ವತಿಯಿಂದ ನಡೆದ “ಸಿ.ಬಿ.ಎಸ್.ಇ ಹಾಗೂ ಎನ್.ಇ.ಪಿ ಅರಿವು ಕಾರ್ಯಕ್ರಮ”ದಲ್ಲಿ ಭಾಗವಹಿಸಿದ ತಜ್ಞರು ತಮ್ಮ ಅಭಿಪ್ರಾಯ ಮಂಡಿಸಿ, ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.    ರಾಷ್ಟ್ರೀಯ ಶಿಕ್ಷಣ ನೀತಿಯೂ ಭಾರತೀಯ ಸಂಸ್ಕೃತಿಯನ್ನು ಜೋಡಿಸುವದರೊಂದಿಗೆ ಶೈಕ್ಷಣಿಕ ವ್ಯವಸ್ಥೆಯಲ್ಲಿ…

Read More

ವಿಶ್ವದರ್ಶನ ವತಿಯಿಂದ ಅಡಿಕೆ ಭವನದಲ್ಲಿ ಶಿಕ್ಷಣ ಅರಿವು ಶಿಬಿರ

ಯಲ್ಲಾಪುರ: ಅಡಿಕೆ ವರ್ತಕರ ಸಂಘ, ಭಾರತ ಸೇವಾದಳ ಹಾಗೂ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ವತಿಯಿಂದ ಪಟ್ಟಣದ ಎ.ಪಿ.ಎಂ.ಸಿ ಆವಾರದಲ್ಲಿರುವ ಅಡಿಕೆ ವರ್ತಕರ ಸಭಾ ಭವನದಲ್ಲಿ ಫೆ. 26ರಂದು ಬೆಳಗ್ಗೆ 10 ಗಂಟೆಗೆ ಸಿ.ಬಿ.ಎಸ್.ಇ ಹಾಗೂ ಎನ್.ಇ.ಪಿ ಕುರಿತು ಅರಿವು ಶಿಬಿರ ನಡೆಯಲಿದೆ.    ದಾಂಡೇಲಿಯ ಬಂಗೂರ ನಗರ ಡಿಗ್ರಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಆರ್.ಜಿ ಹೆಗಡೆ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ “ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬೆಳಗಾವಿಯ ಕೆ.ಎಲ್.ಇ…

Read More

ಕನ್ನಡ ಭಾಷೆ ಉಳಿವಿಗಾಗಿ ಇರುವ ದೊಡ್ಡ ಮಾರ್ಗ ಯಕ್ಷಗಾನ

ಯಲ್ಲಾಪುರ: ಸತತ ಅಧ್ಯಯನ ಹಾಗೂ ಸಾಧನೆಯ ಮೂಲಕ ಪ್ರತಿಯೊಬ್ಬರು ಗುರುವಿನ ಋಣ ತೀರಿಸಲು ಪ್ರಯತ್ನಿಸಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ಜಿ.ಎಲ್ ಹೆಗಡೆ ಅವರು ಹೇಳಿದರು.ಅವರು ಶನಿವಾರ ಪಟ್ಟಣದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಿಂದ ಪಡೆದದನ್ನು ಸಮಾಜಕ್ಕೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಶಾಲೆಯಲ್ಲಿ ಕಲಿತ ಮಕ್ಕಳು ದೊಡ್ಡವರಾದ ನಂತರ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು. ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾಗಿದೆ. ನಿರಂತರ ಅಧ್ಯಯನ,…

Read More

ಗಮನ ಸೆಳೆದ ಚಿತ್ರಪಟ ಹಾಗೂ ಗಣಿತ ಮಾದರಿ

ಯಲ್ಲಾಪುರ: ವಿಶ್ವದರ್ಶನ ಕೇಂದ್ರಿಯ ವಿದ್ಯಾಲಯದಲ್ಲಿ ವಿದ್ಯಾಥಿಗಳು ತಯಾರಿಸಿದ ಗಣಿತ ಮಾದರಿ ಹಾಗೂ ಚಿತ್ರಪಟಗಳು ಗಮನ ಸೆಳೆದವು.ಮುರಾರ್ಜಿ ಶಾಲೆಯ ಮಕ್ಕಳು ಶಾಲಾ ಶಿಕ್ಷಕರೊಂದಿಗೆ ಆಗಮಿಸಿ ಗಣಿತ ಮಾದರಿ ಹಾಗೂ ಚಿತ್ರಪಟಗಳನ್ನು ಗಮನಿಸಿದರು. ನಂತರ ಅವರು ವಿದ್ಯಾರ್ಥಿಗಳಿಂದ ಮಾದರಿಗಳ ಬಗ್ಗೆ ಮಾಹಿತಿ ಪಡೆದರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಅವರು ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಸನ್ನ ಹೆಗಡೆ, ವೆಂಕಟೇಶ ಪಾಲನಕರ್ ಹಾಗೂ ನೀತಾ ನಾಯ್ಕ ನಿರ್ಣಾಯಕರಾಗಿ ಭಾಗವಹಿಸಿದ್ದರು.

Read More

ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಟಿವಿ ನೀಡಿದ ಬಾಲಾಜಿ ಹೊಲೂರ್

ಯಲ್ಲಾಪುರ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಸ್ಯಾಮಸಂಗ್ ಕಂಪನಿಯ ಹಿರಿಯ ಉಪಾಧ್ಯಕ್ಷ ಬಾಲಾಜಿ ಹೊಲೂರ್ ಅವರು ವಯಕ್ತಿಕವಾಗಿ ಟಿವಿಯೊಂದನ್ನು ದೇಣಿಗೆಯಾಗಿ ನೀಡಿದ್ದಾರೆ. ಟಿವಿ ಹಸ್ತಾಂತರಿಸಿ ಮಾತನಾಡಿದ ಅವರು, ಕಠಿಣ ಪ್ರರಿಶ್ರಮದಿಂದ ಯಶಸ್ಸು ಸಾಧ್ಯವಿದೆ. ಸವಾಲುಗಳನ್ನು ಸ್ವೀಕರಿಸಿ ಮುನ್ನಡೆಯುವವರಿಗೆ ಹೆಚ್ಚು ಅವಕಾಶಗಳು ದೊರೆಯುತ್ತದೆ ಎಂದು ಹೇಳಿದರು. ಮುಖ್ಯಾಧ್ಯಾಪಕರಾದ ಮುಕ್ತಾ ಶಂಕರ್ ಅವರು ಮಾತನಾಡಿ, ವಿದ್ಯಾರ್ಥಿಗಳು ತಾಳ್ಮೆ ಹಾಗೂ ಸಹನೆಯನ್ನು ಬೆಳೆಸಿಕೊಳ್ಳಬೇಕು. ಧನಾತ್ಮಕ ಚಿಂತನೆಗಳಿಗೆ ಹೆಚ್ಚಿನ ಆಧ್ಯತೆ ಕೊಡಬೇಕು ಎಂದರು. ವಿಶ್ವದರ್ಶನ ಶಿಕ್ಷಣ ಮಹಾ ವಿದ್ಯಾಲಯ (ಬಿ.ಇಡಿ)ದ…

Read More