
ಯಲ್ಲಾಪುರ: ಸ್ಥಳೀಯವಾಗಿ ದೊರೆಯುವ ವಸ್ತುಗಳಿಂದ ವಿದ್ಯಾರ್ಥಿಗಳು ತಯಾರಿಸಿದ ಪುಷ್ಪಗುಚ್ಚಗಳು ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಗಮನ ಸೆಳೆದವು.
ವಿಜ್ಞಾನ ವೇದಿಕೆ ಅಡಿ ಮಂಗಳವಾರ ಪರಿಸರ ಸ್ನೇಹಿ ಪುಷ್ಪಗುಚ್ಚ ಪ್ರದರ್ಶನ ಕಾರ್ಯಕ್ರಮ ನಡೆಸಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. 40ಕ್ಕೂ ಅಧಿಕ ಮಕ್ಕಳು ತಮ್ಮ ಮನೆಯ ಸುತ್ತ ಬೆಳೆಯುವ ಹೂವುಗಳನ್ನು ಸಂಗ್ರಹಿಸಿ ಬಗೆ ಬಗೆಯ ಚಿತ್ತಾರ ರಚಿಸಿದ್ದರು. ಅಡಿಕೆ ಹಾಳೆ, ತೆಂಗಿನಗರಿ, ವಿವಿಧ ಎಲೆಗಳು ಹಾಗೂ ಬಗೆ ಬಗೆಯ ಹೂವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಪುಷ್ಪಗುಚ್ಚ ತಯಾರಿಸಿದ್ದರು. ವಿಜ್ಞಾನ ಶಿಕ್ಷಕಿ ಲತಾ ಹೆಗಡೆ ಇವರಿಗೆ ಮಾರ್ಗದರ್ಶನ ಮಾಡಿದರು. ಶಿಕ್ಷಕರಾದ ರಾಘವೇಂದ್ರ ಹೆಗಡೆ, ನವೀನಾ ಗುನಗಾ ಇದ್ದರು.
