ಯಲ್ಲಾಪುರ: ಶಿಕ್ಷಣ ಪ್ರೇಮಿಯಾಗಿದ್ದ ಗಜಾನನ ಭಟ್ಟ ಅವರು ಬುಧವಾರ ನಿಧನರಾಗಿದ್ದಾರೆ. ಅವರ ನಿಧನಕ್ಕೆ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಕಂಬನಿ ಮಿಡಿದಿದೆ.
ಗಜಾನನ ಭಟ್ಟ ಅವರು ಯಲ್ಲಾಪುರ ತಾಲೂಕಾ ಶಿಕ್ಷಣ ಸಮಿತಿ (ವೈ.ಟಿ.ಎಸ್.ಎಸ್)ನ ಅಧ್ಯಕ್ಷರಾಗಿದ್ದರು. ತಮ್ಮ ಇಳಿ ವಯಸ್ಸಿನಲ್ಲಿ ಸಹ ಅವರು ಶೈಕ್ಷಣಿಕ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದರು. ಬಡ ಮಕ್ಕಳ ಕುರಿತು ಅಪಾರ ಕಾಳಜಿ ಹೊಂದಿದ್ದರು. ಗ್ರಾಮೀಣ ಭಾಗದ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು. ಅವರ ನಿಧನದಿಂದ ಶಿಕ್ಷಣ ಕ್ಷೇತ್ರಕ್ಕೆ ನಷ್ಟವಾಗಿದೆ ಎಂದು ವಿಶ್ವದರ್ಶನ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಗ್ರಾಮೀಣ ಮಕ್ಕಳ ವಿದ್ಯಾಬ್ಯಾಸಕ್ಕೆ ಗಜಾನನ ಭಟ್ಟ ಅವರ ಕೊಡುಗೆ ಅಪಾರ. ಶೈಕ್ಷಣಿಕ ಪ್ರೇಮಿಯಾಗಿದ್ದ ಅವರು ಹಲವರಿಗೆ ಮಾರ್ಗದರ್ಶಕರಾಗಿದ್ದರು. ಅವರ ನಿಧನದಿಂದ ಶಿಕ್ಷಣ ಕ್ಷೇತ್ರಕ್ಕೆ ನಷ್ಟವಾಗಿದೆ.
- ಶ್ರೀನಿವಾಸ ಹೆಬ್ಬಾರ್, ಉಪಾಧ್ಯಕ್ಷರು, ವಿಶ್ವದರ್ಶನ ಶಿಕ್ಷಣ ಸಂಸ್ಥೆ
ಜನ ಶಿಕ್ಷಣ ಪಡೆಯಬೇಕು ಎಂಬ ಕನಸನ್ನು ಹೊಂದಿದ್ದ ಗಜಾನನ ಭಟ್ಟ ಅವರು ತಮ್ಮ ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಉದ್ಯಮಿಯಾಗಿ, ಸಮಾಜ ಸೇವಕರಾಗಿ ಅವರು ಹೆಸರು ಗಳಿಸಿದ್ದರು. ಅವರ ನಿಧನದಿಂದ ಇಡೀ ತಾಲೂಕಿಗೆ ನಷ್ಟವಾಗಿದೆ.
- ನರಸಿಂಹ ಕೋಣೆಮನೆ, ನಿರ್ದೇಶಕರು, ವಿಶ್ವದರ್ಶನ ಶಿಕ್ಷಣ ಸಂಸ್ಥೆ