
ಯಲ್ಲಾಪುರ: ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ನೇತಾಜಿ ಸಮಾಜ ವಿಜ್ಞಾನ ಸಂಘದ ಅಡಿಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತೀಯ ಸಂವಿಧಾನದ ಮಹತ್ವದ ಕುರಿತು ಮಕ್ಕಳಿಗೆ ಅರಿವು ಮೂಡಿಸಲಾಯಿತು.
ಶಾಲೆಯ ಮುಖ್ಯಾಧ್ಯಾಪಕರಾದ ಪ್ರಸನ್ನ ಹೆಗಡೆ ಅವರು ಸಂವಿಧಾನದ ಅಗತ್ಯತೆ, ಸಂವಿಧಾನದ ಶ್ರೇಷ್ಠತೆಯ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳಾದ ಮಹೇಶ ಗೌಡ, ಅನನ್ಯ ನಾಯ್ಕ, ವಿಜೇತಾ ಭಟ್ಟ ಹಾಗೂ ವಾಗೀಶ ಭಟ್ಟ ಅವರು ಸಂವಿಧಾನದ ಲಕ್ಷಣ, ಮೂಲಭೂತ ಹಕ್ಕು ವಿಷಯದ ಕುರಿತು ಮಾತನಾಡಿದರು. ವಿನಯ ನಾಯ್ಕ ಸ್ವಾಗತಿಸಿದರು. ರಮ್ಯಾ ಮಡಿವಾಳ ನಿರ್ವಹಿಸಿದರು. ಭಾರ್ಗವಿ ಭಟ್ಟ ವಂದಿಸಿದರು.