ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಸಂಸ್ಕೃತ ಪಾಠ ಪ್ರಾರಂಭೋತ್ಸವ

ಯಲ್ಲಾಪುರ: ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾರದಾಂಬಾ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಸಂಸ್ಕೃತ ಬೋಧನೆ ಶುರು ಮಾಡಲಾಗಿದೆ.
    ಬುಧವಾರ ಸಂಸ್ಕೃತ ಪಾಠ ಪ್ರಾರಂಭೋತ್ಸವ ನಡೆಯಿತು. ಸ್ವರ್ಣವಲ್ಲಿ ಶ್ರೀ ರಾಜರಾಜೇಶ್ವರಿ ಮಹಾವಿದ್ಯಾಲಯದ ವೇದ ಪ್ರಾಧ್ಯಾಪಕರಾದ ಡಾ. ನಾಗರಾಜ ಭಟ್ಟ ಕೋಣೆಮನೆ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವೇದದಿಂದ ಅನೇಕ ಗೃಂಥಗಳು ಉದ್ಬವವಾಗಿದೆ. ವೇದದ ಅಂತರಾತ್ಮ ತಿಳಿಯಲು ಸಂಸ್ಕೃತ ಭಾಷೆ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾರದಾಂಬಾ ದೇವಾಲಯ ಅಧ್ಯಕ್ಷರಾದ ಡಿ.ಶಂಕರ್ ಭಟ್ಟ ಅವರು ಮಾತನಾಡಿ, ಸಂಸ್ಕೃತವು ಎಲ್ಲಾ ಭಾಷೆಯ ತಾಯಿಯಾಗಿದೆ. ಸಂಸ್ಕೃತ ಅತ್ಯಂತ ಸರಳ ಭಾಷೆಯಾಗಿದ್ದು, ನಾವು ನಿತ್ಯ ಬಳಸುವ ಪದಗಳಲ್ಲಿ ಅಡಗಿದೆ ಎಂದರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಸಲು ಆಸಕ್ತಿ ವಹಿಸಬೇಕು ಎಂದರು.
    ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆ ಮುಖ್ಯಾಧ್ಯಾಪಕರಾದ ಪ್ರಸನ್ನ ಹೆಗಡೆ, ಉಪನ್ಯಾಸಕರಾದ ಡಿ.ಕೆ ಗಾಂವ್ಕರ್ ವೇದಿಕೆಯಲ್ಲಿದ್ದರು. ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಭಾತ್ ಭಟ್ಟ ಪ್ರಾರ್ಥಿಸಿದರು. ಪ್ರಸನ್ನ ಹೆಗಡೆ ಪ್ರಸ್ತಾಪಿಸಿದರು. ಶ್ಯಾಮಲಾ ಕೆರೆಗದ್ದೆ ಸ್ವಾಗತಿಸಿದರು. ಶಿವರಾಂ ಭಾಗ್ವತ್ ನಿರ್ವಹಿಸಿದರು. ನರಸಿಂಹ ಭಟ್ಟ ವಂದಿಸಿದರು.

Leave a Reply

Your email address will not be published. Required fields are marked *