ಯಲ್ಲಾಪುರ: ಚಂಡಿಗಢದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಹಾಕಿ ರೂಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಸಬ್ ಜೂನಿಯರ್ ತಂಡದ ನಾಯಕನಾಗಿವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ತಪನ ಲಕ್ಷ್ಮೀಕಾಂತ ಭಟ್ಟ ಆಯ್ಕೆಯಾಗಿದ್ದಾರೆ. ತಪನ ಲಕ್ಷ್ಮೀಕಾಂತ ಭಟ್ಟ ಅವರೊಂದಿಗೆ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾದ ಅನ್ಶ ಪತ್ತಾರ, ಅಂಜನಾ ರವೀಂದ್ರ ಭಟ್, ದಿಯಾ ಸುರೇಶ್ ರೇವಣಕರ್, ಋತುರಜ್ ವಿಶಾಲ್ ಕಟ್ವಾಕರ್, ನಮನ್ ಎಸ್ ಕೆ, ಪುಷ್ಕರ್ ಪ್ರಕಾಶ, ಗುರುರಾಜ್ ವಿಶಾಲ್ ಕಟ್ವಾಕರ್ ಸಹ ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಡಿಸೆಂಬರ್ 15ರಿಂದ 22ರ ವರೆಗೆ ಈ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ದಿಲೀಪ ಹಣಬರ್ ಹಾಗೂ ಅಜಯ್ ಗಾವಡ ತರಬೇತಿ ನೀಡಿದ್ದರು. ಈ ಎಲ್ಲ ಕ್ರೀಡಾಪಟುಗಳಿಗೆ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಾಧ್ಯಾಪಕರಾದ ಗಣೇಶ ಭಟ್ಟ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯವರು ಅಭಿನಂಧಿಸಿ, ಶುಭ ಹಾರೈಸಿದ್ದಾರೆ.