ಯಲ್ಲಾಪುರ: ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ವತಿಯಿಂದ ನಾಯ್ಕನಕೆರೆ ಶಾರದಾಂಬಾ ಸಭಾ ಭವನದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉರಗ ತಜ್ಞ ಅಕ್ಬರ್ ಶೇಕ್ ವಿವಿಧ ಹಾವುಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು.
ಹಾವುಗಳ ಜೀವನ ಶೈಲಿ, ಹಾವುಗಳಲ್ಲಿನ ವೈವಿಧ್ಯತೆ, ಅಪಾಯಕಾರಿ ಹಾಗೂ ಅಪಾಯಕಾರಿ ಅಲ್ಲದ ಹಾವುಗಳ ಬಗ್ಗೆ ಅವರು ಚಿತ್ರಗಳ ಸಮೇತ ವಿವರಿಸಿದರು. ಈ ಸಭಾ ಕಾರ್ಯಕ್ರಮವನ್ನು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಮುಕ್ತಾ ಶಂಕರ್ ಅವರು ಉದ್ಘಾಟಿಸಿದರು. ಅರಣ್ಯಾಧಿಕಾರಿ ಪ್ರಶಾಂತ ಅವರು ಹಾಜರಿದ್ದು, ಹಾವುಗಳ ಪ್ರಬೇಧ ಮತ್ತು ಗುಣ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಇತರರು ಇದ್ದರು.