
ಯಲ್ಲಾಪುರ: ಅನುಭವಗಳ ಹೆಚ್ಚಳಕ್ಕಾಗಿ ಪ್ರವಾಸ ಮಾಡುವುದು ಸೂಕ್ತ ಎಂದು ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಪ್ರಸನ್ನ ಹೆಗಡೆ ಅವರು ಹೇಳಿದರು.
ಅವರು ಮಂಗಳವಾರ ಬೆಳಕಿನಂದ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ನೇತಾಜಿ ಸಮಾಜ ವಿಜ್ಞಾನಗಳ ಸಂಘದ ಆಶ್ರಯದಲ್ಲಿ ಇಡಗುಂದಿಯ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆ ಆವಾರದಲ್ಲಿ ನಡೆದ ವಿಶ್ವ ಪ್ರವಾಸೋಧ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋಶ ಓದು, ದೇಶ ಸುತ್ತು ಎಂಬ ಮಾತಿದೆ. ಅದರಂತೆ, ಉತ್ತಮ ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಪ್ರವಾಸಗಳನ್ನು ಮಾಡಿದಾಗ ಅನುಭವಗಳು ಹೆಚ್ಚುತ್ತವೆ ಎಂದು ಅವರು ಹೇಳಿದರು. ಸಮಾಜ ವಿಜ್ಞಾನ ಶಿಕ್ಷಕರಾದ ರಾಘವೇಂದ್ರ ಹೆಗಡೆ ಅವರು ಮಾತನಾಡಿ, ಪ್ರವಾಸ ಎಂಬುದು ಮೋಜಿಗೆ ಮಾತ್ರ ಸಿಮೀತವಾಗಿರಬಾರದು. ಜ್ಞಾನ ಸಂಪಾದನೆ ದೃಷ್ಠಿಯಿಂದಲೂ ಪ್ರವಾಸ ಮಾಡುವುದು ಸೂಕ್ತ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ನವೀನ ಗುನಗಾ ಹಾಜರಿದ್ದರು. ಲತಾ ಕೆ ಹೆಗಡೆ ಸ್ವಾಗತಿಸಿದರು. ಪಲ್ಲವಿ ಭಟ್ಟ ನಿರ್ವಹಿಸಿದರು. ಸೌಮ್ಯ ಭಟ್ಟ ವಂದಿಸಿದರು.