
ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆ ಆವರದಲ್ಲಿ ಶನಿವಾರ ನಡೆದ “ಜಾಂಬವತಿ ಕಲ್ಯಾಣ” ಯಕ್ಷಗಾನ ತಾಳಮದ್ದಲೆ ಕಲಾಭಿಮಾನಿಗಳನ್ನು ರಂಜಿಸಿತು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಶ್ರಯದಲ್ಲಿ ಈ ತಾಳಮದ್ದಲೆ ಆಯೋಜಿಸಲಾಗಿತ್ತು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ನಡೆದ ತಾಳಮದ್ದಲೆ ಕಾರ್ಯಕ್ರಮದಲ್ಲಿ ಹಿಮ್ಮೇಳದಲ್ಲಿ ಅನಂತ ಹೆಗಡೆ ದಂತಳಿಗೆ ಭಾಗವತರಾಗಿ ಹಾಗೂ ನರಸಿಂಹ ಭಟ್ಟ ಹಂಡ್ರಮನೆ ಮದ್ದಳೆ ವಾದಕರಾಗಿ ಕಾರ್ಯ ನಿರ್ವಹಿಸಿದರು. ಬಲರಾಮನ ಪಾತ್ರದಲ್ಲಿ ಡಾ. ಡಿ.ಕೆ ಗಾಂವ್ಕರ್, ಕೃಷ್ಣನ ಪಾತ್ರದಲ್ಲಿ ಚಂದ್ರಕಲಾ ಭಟ್ಟ, ಜಾಂಬವoತನ ಪಾತ್ರದಲ್ಲಿ ಶುಭಾ ಭಟ್ಟ, ನಾರದನ ಪಾತ್ರದಲ್ಲಿ ಭಾರತಿ ಭಟ್ಟ, ಸತ್ರಾಜಿತನ ಪಾತ್ರದಲ್ಲಿ ಶ್ವೇತಾ ವೈದ್ಯ ಹಾಗೂ ಕೃತವರ್ಮನಾಗಿ ಅರ್ಚನಾ ಹೆಗಡೆ ಪಾತ್ರ ನಿಭಾಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಜಿಲ್ಲಾ ಸಂಯೋಜಕರಾದ ಗಣಪತಿ ಬೋಳಗುಡ್ಡೆ, ಜಿಲ್ಲಾ ಉಪಾಧ್ಯಕ್ಷರಾದ ಶಂಕರ ಭಟ್ಟ ತಾರಿಮಕ್ಕಿ, ತಾಲೂಕಾ ಕಾರ್ಯದರ್ಶಿಗಳಾದ ಶ್ರೀರಾಮ ಲಾಲಗುಳಿ, ಸಂಚಾಲಕರಾದ ಡಾ.ಕವಿತಾ ಹೆಬ್ಬಾರ್, ಉಪನ್ಯಾಸಕರಾದ ಡಾ. ಡಿ.ಕೆ ಗಾಂವ್ಕರ್ ಇದ್ದರು.