ಯಲ್ಲಾಪುರ: ತಾಲೂಕಿನ ಇಡಗುಂದಿ ವಿಶ್ವದರ್ಶನ ಪ್ರೌಢ ಶಾಲೆಯಲ್ಲಿ ನಡೆದ ಕ್ರೀಡಾ ದಿನಾಚರಣೆ ಹಾಗೂ ಧ್ಯಾನ್ ಚಂದ್ರ ಜನ್ಮದಿನ ಕಾರ್ಯಕ್ರಮವನ್ನು ವಿಶ್ವದರ್ಶನ ಸೇವಾ ತಂಡದ ಸದಸ್ಯರಾದ ಎಂ.ಆರ್ ಭಟ್ಟ ಅವರು ಉದ್ಘಾಟಿಸಿದರು. ಕ್ರೀಡಾಪಟು ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಜೆ.ಎಂ ತಾಂಡುರಾಯನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು. ರಾಜೇಶ್ ಆಗೇರ್ ಅವರು ಪ್ರಾರ್ಥಿಸಿದರು. ವಿಶ್ವೇಶ್ವರ ಗಾಂವ್ಕರ್ ಅವರು ಸ್ವಾಗತಿಸಿ, ವಂದಿಸಿದರು. ಪಾಲಕರು ಹಾಗೂ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಕಾರ್ಯಕ್ರಮ ವೀಕ್ಷಿಸಿದರು.
Read More