ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಮಹಾ ವಿದ್ಯಾಲಯಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ “ಕಲಿಕಾರ್ಥಿ ಸಹಾಯ ಕೇಂದ್ರ” ಪ್ರಾರಂಭಿಸಲು ಅನುಮತಿ ದೊರೆತಿದೆ.
ದೂರ ಶಿಕ್ಷಣ ವ್ಯವಸ್ಥೆ ಮೂಲಕ ಉನ್ನತ ಶಿಕ್ಷಣ ಪಡೆಯುವವರಿಗೆ ಈ ಕಲಿಕಾ ಕೇಂದ್ರ ನೆರವಾಗಲಿದೆ. ಪದವಿ, ಸ್ನಾತಕೋತರ ಪದವಿಗೆ ಸಂಬoಧಿಸಿ ಬಿ.ಎ, ಬಿ.ಕಾಂ, ಬಿ.ಲಿಬ್, ಬಿ.ಬಿ.ಎ ಹಾಗೂ ಬಿ.ಎಸ್ಸಿ ಪ್ರವೇಶ ಬಯಸುವ ಅಭ್ಯರ್ಥಿಗಳು ಇಲ್ಲಿ ದಾಖಲಾಗಬಹುದಾಗಿದೆ. ಸ್ನಾತಕೋತರ ಪದವಿಗೆ ಸಂಬoಧಿಸಿ ಎಂ.ಎ, ಎಂ.ಕಾo, ಎಂ.ಲಿಬ್ ಹಾಗೂ ಎಂ.ಎಸ್.ಇ ಕಲಿಕಾ ಕೇಂದ್ರವನ್ನು ತೆರೆಯಲಾಗಿದೆ. ಪದವಿ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಅಂಕಪಟ್ಟಿ, ಆಧಾರ್, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್ ಪ್ರತಿಗಳ ಜೊತೆ ಮೊಬೈಲ್ ನಂ ಹಾಗೂ ಇಮೇಲ್ ಐಡಿ ಅನ್ನು ಒದಗಿಸಬೇಕಿದೆ. ಸ್ನಾತಕೋತರ ಪದವಿಗೆ ಪ್ರವೇಶ ಪಡೆಯುವವರು ಈ ಎಲ್ಲಾ ದಾಖಲೆಗಳ ಜೊತೆ ಪದವಿ ಅಂಕಪಟ್ಟಿಯನ್ನು ಒದಗಿಸಬೇಕಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯ. ಆಸಕ್ತ ಅಭ್ಯರ್ಥಿಗಳು ನ. 18ರ ಒಳಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಸಹಾಯವಾಣಿ ಸಂಖ್ಯೆ: 7337875279 ಸಂಪರ್ಕಿಸುವoತೆ ಪ್ರಕಟಣೆ ತಿಳಿಸಿದೆ.