Archives: News

`ಸಾಮಾಜಿಕ ಸಹಬಾಳ್ವೆಯ ಮೂಲಕ ಜೀವನ ಮೌಲ್ಯ ಹೆಚ್ಚಿಸಿಕೊಳ್ಳಿ’

ಯಲ್ಲಾಪುರ: ಎಲ್ಲಾ ವೇದ ಹಾಗೂ ಧರ್ಮಗಳು ಸಾಮಾಜಿಕ ಸಹಬಾಳ್ವೆಯ ವಿಷಯವನ್ನು ಸಾರಿವೆ. ಸತ್ಯ, ಪ್ರಾಮಾಣಿಕತೆ, ಪರೋಪಕಾರ, ಸಾಮಾಜಿಕ ಕಳಕಳಿ ಮೊದಲಾದ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡವರು ಉತ್ತಮ ಪ್ರಜೆಯಾಗುತ್ತಾರೆ ಎಂದು ಭಾರತ ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಹಾಗೂ ದೆಹಲಿ ಸರ್ಕಾರದ ಮಾಹಿತಿ ಹಾಗೂ ತಂತ್ರಜ್ಞಾನ ವಿಭಾಗದ ನಿವೃತ್ತ ಸಲಹೆಗಾರಾದ ಸಿ ವಿ ಗೋಪಿನಾಥ ಹೇಳಿದರು.ಅವರು ಶುಕ್ರವಾರ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವದರ್ಶನ ಕರಿಯರ್ ಅಕಾಡೆಮಿ ಹಾಗೂ ವಿಶ್ವದರ್ಶನ ಶಿಕ್ಷಣ ಮಹಾ ವಿದ್ಯಾಲಯ (ಬಿ.ಇಡಿ)ಯ ಪ್ರೇರಣಾ ತರಗತಿ ಉಪನ್ಯಾಸ…

Read More

ಪ್ರತಿಭೆ ಬೆಳಗಲು ಶಿಕ್ಷಣ ಅಗತ್ಯ: ಸ್ವರ್ಣವಲ್ಲಿ ಶ್ರೀ

ಯಲ್ಲಾಪುರ: ಪ್ರತಿಭೆಗಳು ಬೆಳೆಯಲು ಉತ್ತಮ ಶಿಕ್ಷಣ ಅಗತ್ಯ ಎಂದು ಸೋಂದಾ ಶ್ರೀ ಸ್ವರ್ಣವಲ್ಲಿ ಸಂಸ್ಥಾನದ ಶ್ರೀಮದ್ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದರು.ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಶ್ರೀಮದ್ ಗಂಗಾಧರೇoದ್ರ ಸರಸ್ವತೀ ಸಭಾ ಭವನ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.ನಮಗೆ ಬೇಕಾದ ಶಿಕ್ಷಣ ವ್ಯವಸ್ಥೆಯನ್ನು ಪಡೆದುಕೊಳ್ಳಲು ನಾವು ಕಷ್ಟಪಡಬೇಕಾಗಿ ಬಂದಿದೆ. ಸಾಕಷ್ಟು ಪ್ರತಿಭಾನ್ವಿತರಿರುವ ಉತ್ತರ ಕನ್ನಡದವರಿಗೆ ಉತ್ತಮ ಶಿಕ್ಷಣ ದೊರೆಯುತ್ತಿಲ್ಲ ಎಂಬ ಕೊರಗಿತ್ತು. ಆ ಕೊರಗು ಇದೀಗ ದೂರವಾಗಿದೆ. ದೇಶಕ್ಕೆ ಕೊಡುಗೆ ನೀಡಬಹುದಾದ…

Read More

ಯಶಸ್ವಿಯಾದ ರಕ್ತದಾನ ಶಿಬಿರ

ಯಲ್ಲಾಪುರ: ಪ್ರತಿ ತಾಲೂಕಿಗೂ ಒಂದು ರಕ್ತ ನಿಧಿ ಬ್ಯಾಂಕ್ ಅಗತ್ಯವಿದೆ ಎಂದು ಶಿರಸಿ ಟಿ ಎಸ್ ಎಸ್ ಶ್ರೀಪಾದ ಹೆಗಡೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೆಡಿಕಲ್ ಆಫಿಸರ್ ಡಾ. ಪಿ.ಎಸ್ ಹೆಗಡೆ ಅವರು ಹೇಳಿದರು.ಅವರು ಬುಧವಾರ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಆವಾರದಲ್ಲಿ ವಿಶ್ವದರ್ಶನ ಸೇವಾ ವತಿಯಿಂದ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬರಿಗೂ ತಮ್ಮ ರಕ್ತದ ಗುಂಪುನ ಬಗ್ಗೆ ಅರಿವಿರಬೇಕು. ಅಪಘಾತದಂತಹ ತುರ್ತು ಪರಿಸ್ಥಿತಿಯಲ್ಲಿ ರಕ್ತ ಮಾತ್ರ ಮನುಷ್ಯನನ್ನು ಬದುಕಿಸಬಲ್ಲದು. ಪುರುಷರು ವರ್ಷಕ್ಕೆ 4 ಬಾರಿ, ಮಹಿಳೆಯರು…

Read More

ಮೇ. 4ರಂದು ಸ್ವರ್ಣವಲ್ಲಿ ಶ್ರೀಗಳ ಆಶೀರ್ವಚನ

ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಆವಾರದಲ್ಲಿ ನಿರ್ಮಿಸಲಾದ “ಶ್ರೀ ಶ್ರೀಮದ್ ಗಂಗಾಧರೇOದ್ರ ಸರಸ್ವತೀ” ಸಭಾಭವನ ಮೇ. ೪ರಂದು ಉದ್ಘಾಟನೆಯಾಗಲಿದೆ.ಅಂದು ಮಧ್ಯಾಹ್ನ 4ಗಂಟೆಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಸಭಾ ಭವನವನ್ನು ಉದ್ಘಾಟಿಸಲಿದ್ದಾರೆ. ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಶ್ರೀ ಶ್ರೀಮದ್ ಗಂಗಾಧರೇOದ್ರ ಸರಸ್ವತೀ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದು, ಆಶೀರ್ವಚನ ನೀಡಲಿದ್ದಾರೆ. ಜಿಲ್ಲಾಧಿಕಾರಿ ಮುಲೈ ಮುಹಿಲನ್, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ ಕೋಣೆಮನೆ, ಉಪಾಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ್ ಮೊದಲಾದವರು…

Read More

ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆ ಬೆಳಸಬೇಕು

ಯಲ್ಲಾಪುರ: ಶಾಲೆಯಲ್ಲಿ ಮಕ್ಕಳು ಸ್ಪರ್ಧಾತ್ಮಕ ಮನೋಭಾವನೆಯಿಂದ ಓದುವ ವಾತಾವರಣ ನಿರ್ಮಾಣವಾಗಬೇಕು ಎಂದು ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್ ಹೇಳಿದರು.ವಿಶ್ವದರ್ಶನ ಶಿಕ್ಷಣ ಸಂಸ್ಥೆ ಆವಾರದಲ್ಲಿ ಶುಕ್ರವಾರ ನಡೆದ “ವಿಶ್ವದರ್ಶನ ಸಂಭ್ರಮ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮೊದಲು ಹಣ ಉಳ್ಳವವರಿಗೆ ಮಾತ್ರ ಶಿಕ್ಷಣ ಎಂಬ ಕಾಲವಿತ್ತು. ಆದರೆ, ಇದೀಗ ಪ್ರತಿ ಮಕ್ಕಳು ಉತ್ತಮ ಶಾಲೆಯಲ್ಲಿ ಕಲಿಯಲು ಬಯಸುತ್ತಾರೆ. ಸ್ಪರ್ಧಾತ್ಮಕವಾಗಿ ಮಕ್ಕಳು ಕಲಿಯುವ ರೀತಿಯಲ್ಲಿ ಗ್ರಾಮ ಪಂಚಾಯಿತಿಗೊAದು ಮಾದರಿ ಶಾಲೆಯನ್ನು ಅಭಿವೃದ್ಧಿಪಡಿಸಿ, ಆ ಭಾಗದ ಎಲ್ಲಾ ಮಕ್ಕಳು ಅಲ್ಲಿ ಕಲಿಯುವಂತಹ ವ್ಯವಸ್ಥೆ…

Read More

ಮಕ್ಕಳ ಜೊತೆ ಬೆರೆತ ಶಿಕ್ಷಣ ಸಚಿವ

ಯಲ್ಲಾಪುರ: ಸ್ವಾವಲಂಬಿಯನ್ನು ಪರಾವಲಂಬಿಯಾಗಿ ಮಾಡುವ ಶಿಕ್ಷಣ ವ್ಯವಸ್ಥೆ ಬ್ರಿಟಿಷರಿಂದ ಬಂದಿದೆ. ಇಂತಹ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಿ ಸಂಸ್ಕಾರಯುತ, ವ್ಯಕ್ತಿ ನಿರ್ಮಾಣ, ನೈತಿಕತೆಯ ಶಿಕ್ಷಣ ನೀಡುವುದಕ್ಕಾಗಿ ನೂತನ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ ಎಂದು ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ ಹೇಳಿದರು.ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ವಿಶ್ವದರ್ಶನ ಪಿ.ಯು ಕಾಲೇಜು ಹಾಗೂ ಕೇಂದ್ರಿಯ ಶಾಲೆಯನ್ನು ಉದ್ಘಾಟಿಸಿ, “ಶಿಕ್ಷಣ, ಸಂಸ್ಕಾರ, ರಾಷ್ಟ್ರ ನಿರ್ಮಾಣ” ವಿಷಯದ ಕುರಿತು ಮಾತನಾಡಿದರು.ರಾಮಾಯಣದ ಕಾಲದಲ್ಲಿ ಗುರುಕುಲ ಪದ್ದತಿ ಶಿಕ್ಷಣ, ಮಹಾಭಾರತ ಕಾಲದಲ್ಲಿ ಶಕ್ತಿ ಆಧರಿತ…

Read More

ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ವಿಶ್ವದರ್ಶನ

ಯಲ್ಲಾಪುರ: ಅತೀ ಕಡಿಮೆ ದರದಲ್ಲಿ ಅತ್ಯುತ್ತಮ ಶಿಕ್ಷಣ ನೀಡಲು ವಿಶ್ವದರ್ಶನ ಶಿಕ್ಷಣ ಸಂಸ್ಥೆ ಬದ್ಧವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ ಕೋಣೆಮನೆ ಅವರು ಹೇಳಿದರು. ಭಾನುವಾರ ಸಂಸ್ಥೆ ಆವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಒಂದುವರೆ ವರ್ಷದಿಂದ ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈ ವರ್ಷದಿಂದ ವಿಶ್ವದರ್ಶನ ಪಿ.ಯು ಕಾಲೇಜು ಪ್ರಾರಂಭವಾಗಲಿದೆ. ವಿಜ್ಞಾನ ಹಾಗೂ ವಾಣಿಜ್ಯ ವಿಷಯಗಳನ್ನು ಇಲ್ಲಿ ಬೋಧನೆ ಮಾಡಲಾಗುತ್ತದೆ. ಆಧುನಿಕ ಪ್ರಯೋಗಾಲಯ ನಿರ್ಮಿಸಲಾಗಿದ್ದು, ನುರಿತ ತಜ್ಞರ ನೇಮಕಾತಿ ನಡೆದಿದೆ. ವಾಣಿಜ್ಯ ವಿದ್ಯಾರ್ಥಿಗಳಿಗೆ ಸಿ.ಎ…

Read More

ವಿದ್ಯಾರ್ಥಿ ಪರಿಷತ್ ಚುನಾವಣೆ : ಪ್ರಧಾನ ಕಾರ್ಯದರ್ಶಿಯಾಗಿ ತುಕಾರಾಮ ಲಮಾಣಿ ಆಯ್ಕೆ

ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಮಹಾ ವಿದ್ಯಾಲಯದ (ಬಿ.ಇಡಿ) ವಿದ್ಯಾರ್ಥಿ ಪರಿಷತ್ ನ ಪ್ರಧಾನ ಕಾರ್ಯದರ್ಶಿಯಾಗಿ ತುಕಾರಾಮ ಲಮಾಣಿ ಆಯ್ಕೆಯಾಗಿದ್ದಾರೆ.   ಇದರೊಂದಿಗೆ ಪ್ರಥಮ ವರ್ಷದ ವರ್ಗ ಪ್ರತಿನಿಧಿಯಾಗಿ ಪ್ರವೀಣಕುಮಾರ ಅಗಸರ್, ಸಾಂಸ್ಕೃತಿಕ ಪ್ರತಿನಿಧಿಯಾಗಿ ಕೀರ್ತಿ ಪೂಜಾರಿ, ಸಹ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅನುಷಾ ಕೋಟಾರ್ಕರ, ಕ್ರೀಡಾ ಕಾರ್ಯದರ್ಶಿಯಾಗಿ ಅರ್ಚನಾ ಹೆಗಡೆ, ಸಹ ಕ್ರೀಡಾ ಕಾರ್ಯದರ್ಶಿಯಾಗಿ ಪ್ರಶಾಂತ್ ಅಲ್ವೇಕರ್, ಗ್ರಂಥಾಲಯ ಕಾರ್ಯದರ್ಶಿಯಾಗಿ ಪ್ರಾರ್ಥನಾ ನಾಯ್ಕ, ಸಹ ಗ್ರಂಥಾಲಯ ಕಾರ್ಯದರ್ಶಿಯಾಗಿ ಚೈತ್ರಾ ಪಟಗಾರ್ ಆಯ್ಕೆಯಾದರು. 2022ನೇ ಸಾಲಿನ ಪ್ರಶಿಕ್ಷಣಾರ್ಥಿಗಳ ಚುನಾವಣಾ ಅಧಿಕಾರಿಯಾಗಿ ಸೀತಾರಾಮ…

Read More

S.S.L.C ನಂತರ ಮುಂದೇನು? : ಯಶಸ್ವಿಯಾಗಿ ನಡೆದ ಕಾರ್ಯಗಾರ

ಯಲ್ಲಾಪುರ: ಎಸ್.ಎಸ್.ಎಲ್.ಸಿ ನಂತರ ವಿದ್ಯಾರ್ಥಿಗಳು ಕ್ರಿಯಾಶೀಲತೆ, ಧನಾತ್ಮಕ ವಿಚಾರ ಹಾಗೂ ಆತ್ಮ ವಿಶ್ವಾಸ ಹೆಚ್ಚಳವಾಗುವ ವಿಷಯ ಆಯ್ಕೆ ಮಾಡಿಕೊಳ್ಳುವುದು ಅತೀ ಮುಖ್ಯ ಎಂದು ವೈ.ಟಿ.ಎಸ್.ಎಸ್ ನ ನಿವೃತ್ತ ಪ್ರಾಚಾರ್ಯ ಶ್ರೀರಂಗ ಕಟ್ಟಿ ಅವರು ಹೇಳಿದರು.ವಿಶ್ವದರ್ಶನ ಪಿ.ಯು ಕಾಲೇಜು ಹಾಗೂ ವಿಶ್ವದರ್ಶನ ಕರಿಯರ್ ಅಕಾಡೆಮಿ ಸಹಯೋಗದಲ್ಲಿ ಸಂಸ್ಥೆಯ ಆವಾರದಲ್ಲಿ ನಡೆದ “ಎಸ್.ಎಸ್.ಎಲ್.ಸಿ ನಂತರ ಮುಂದೇನು” ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆಯುವುದು ಸಾಧನೆ ಅಲ್ಲ. ಅಂಕ ಗಳಿಕೆಯ ಜೊತೆ ವ್ಯವಹಾರಿಕ ಜ್ಞಾನವೂ ಅಗತ್ಯ. ಉತ್ತಮವಾದ…

Read More