ಅಂಕೋಲಾ: ಇಲ್ಲಿನ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ನಲ್ಲಿ ವಿಶ್ವ ಆಹಾರ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
“ಆರೋಗ್ಯಕರ ನಾಳೆಗಾಗಿ ಇಂದು ಸುರಕ್ಷಿತ ಆಹಾರ” ಎಂಬ ವಿಷಯದ ಕುರಿತು ಸಂಸ್ಥೆಯ ಉಪ ಪ್ರಾಚಾರ್ಯರಾದ ದೀಪಾಲಿ ಕುರ್ಡೇಕರ್ ಅವರು ಉಪನ್ಯಾಸ ನೀಡಿದರು. ಸುರಕ್ಷಿತ ಆಹಾರ ಉತ್ಪಾದನೆ ಹಾಗೂ ನಿಯಮಿತ ಸೇವನೆಯ ಬಗ್ಗೆ ಅವರು ವಿವರಿಸಿದರು. ಉತ್ತಮ ಆಹಾರದಿಂದ ಉತ್ತಮ ಆರೋಗ್ಯ ದೊರೆಯುತ್ತದೆ ಎಂದು ಅವರು ತಿಳಿಸಿದರು. ಸಂಸ್ಥೆಯ ಶಾಖಾ ಕಾರ್ಯನಿರ್ವಾಹಕರಾದ ಗುರುದತ್ತ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಪ್ರಾಚಾರ್ಯರಾದ ಶಂಕರಗೌಡ ಕಡಿಮನೆ ಅಧ್ಯಕ್ಷತೆ ವಹಿಸಿದ್ದರು.