ಯಲ್ಲಾಪುರ: ಗ್ರಾಮೀಣ ಭಾಗದ ಕೃಷಿ ಹಾಗೂ ತೋಟಗಾರಿಕಾ ಪ್ರದೇಶಗಳಿಗೆ ತೆರಳಿದ ವಿಶ್ವದರ್ಶನ ಸೇವಾ ರೆಜಿಮೆಂಟ್ ನ 42 ವಿದ್ಯಾರ್ಥಿಗಳು ಅಲ್ಲಿನ ರೈತರನ್ನು ಭೇಟಿ ಮಾಡಿ ಕೃಷಿ ಕಾಯಕದ ಬಗ್ಗೆ ಮಾಹಿತಿ ಪಡೆದರು.
ಆನಗೋಡನ ಹಸ್ತಪಾಲಿನ ಕಬ್ಬಿನ ಗದ್ದೆಗೆ ತೆರಳಿ ಕಬ್ಬು ಬೆಳೆಯುವ ವಿಧಾನ, ಕಬ್ಬು ಸಂಸ್ಕರಣೆಯ ಪದ್ಧತಿಗಳ ಬಗ್ಗೆ ಅರಿತುಕೊಂಡರು. ಕೃಷಿಕ ಗಣಪತಿ ಭಟ್ಟ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ನಂತರ ಆಲೆಮನೆಗೆ ಭೇಟಿ ನೀಡಿ ಕಬ್ಬಿನ ಹಾಲನ್ನು ಬೆಲ್ಲ ಮಾಡುವ ಪ್ರಕ್ರಿಯೆಯನ್ನು ಗಮನಿಸಿದರು. ಕಬ್ಬಿನ ಗಾಣ, ಆಧುನಿಕ ಯಂತ್ರ ಪದ್ದತಿಗಳ ಬಗ್ಗೆ ಕೃಷಿ ಕಾರ್ಮಿಕರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ನ ಉಪ ಪ್ರಾಚಾರ್ಯರಾದ ಆಸ್ಮಾ ಶೇಖ್, ಶಿಕ್ಷಕರಾದ ಡಾ. ಡಿ.ಕೆ ಗಾಂವ್ಕರ್, ರಾಘವೇಂದ್ರ ನಾಯ್ಕ ಹಾಜರಿದ್ದರು.