ಧ್ಯಾನ ಶಿಬಿರ ಮುಕ್ತಾಯ

ಯಲ್ಲಾಪುರ: ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲಾ ಆವರದಲ್ಲಿ ಹಮ್ಮಿಕೊಂಡಿದ್ದ ಧ್ಯಾನ ಶಿಬಿರ ಮುಕ್ತಾಯವಾಗಿದೆ.
   ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಂಗಸOಸ್ಥೆಯಾದ ವಿಶ್ವದರ್ಶನ ಸೇವಾ ವತಿಯಿಂದ ಸೋಮವಾರದಿಂದ ಗುರುವಾರದ ವರೆಗೆ ಐದು ದಿನಗಳ ಧ್ಯಾನ ಶಿಬಿರ ಆಯೋಜಿಸಲಾಗಿತ್ತು. ಇದರ ಸಮಾರೋಪ ಕಾರ್ಯಕ್ರಮದಲ್ಲಿ ಧ್ಯಾನ ತರಬೇತಿ ನೀಡಿದ ಬೆಂಗಳೂರಿನ ಮಹರ್ಷಿ ವೇದ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರಾದ ಅನಂತ ಭಟ್ಟ ಶೀಗೇಪಾಲ್ ಅವರನ್ನು ಗೌರವಿಸಲಾಯಿತು. ಇಡಗುಂದಿ ಗ್ರಾಮ ಪಂಚಾಯತ ಸದಸ್ಯರಾದ ವಿ.ಎನ್ ಭಟ್ಟ ಏಕಾನ್, ಸಾಮಾಜಿಕ ಕಾರ್ಯಕರ್ತರಾದ ಪ್ರೇಮಾನಂದ ನಾಯ್ಕ, ವಿಶ್ವದರ್ಶನ ಸೇವಾ ತಂಡದ ಸದಸ್ಯರಾದ ಎಂ.ಆರ್. ಭಟ್ಟ, ಶೇಖರ್ ಬೆಳ್ಳಾಲ, ನಾಗೇಂದ್ರ ಶೆಟ್ಟಿ ಇತರರು ಇದ್ದರು.

Leave a Reply

Your email address will not be published. Required fields are marked *