ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣದ ಬಗ್ಗೆ ಅರಿವು ಅಗತ್ಯ

ಯಲ್ಲಾಪುರ: ಪಠ್ಯ ಚಟುವಟಿಕೆಗಳಿಗಿಂತ ಶಾಲೆಗಳಲ್ಲಿ ಕಲಿಸುವ ಜೀವನ ಶಿಕ್ಷಣ ಅಮೂಲ್ಯವಾದದ್ದು ಎಂದು ಶಿಕ್ಷಣ ಪ್ರೇಮಿ ನಾರಾಯಣ ಹೆಗಡೆ ಗಡಿಕೈ ಅವರು ಹೇಳಿದರು.
   ಪಟ್ಟಣದ ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
    ಕೇವಲ ಪುಸ್ತಕಗಳನ್ನು ಓದುವುದರಿಂದ ಎಲ್ಲ ರೀತಿಯ ಶಿಕ್ಷಣ ದೊರೆಯುವುದಿಲ್ಲ. ಶಾಲಾ ಹಂತದಲ್ಲಿ ಜೀವನ ಶಿಕ್ಷಣ ಒದಗಿಸುವ ಅಗತ್ಯವಿದೆ. ಬಾಲ್ಯದಲ್ಲಿಯೇ ಪಡೆದ ಶಿಕ್ಷಣ ಶಾಶ್ವತವಾಗಿರುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಸ್ಪೂರ್ತಿದಾಯಕ ವಿಚಾರಗಳನ್ನು ಕಲಿಸಬೇಕು. ಸಾಧಕರ ಬಗ್ಗೆ ಪರಿಚಯಿಸಿ ಅವರ ಸಾಧನೆಯ ಶ್ರಮದ ಕುರಿತು ವಿವರಿಸಬೇಕು. ಮಹತ್ವದ ಸಾಧನೆ ಮಾಡಿದ ವ್ಯಕ್ತಿಗಳ ಜೀವನದ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಸ್ಪೂರ್ತಿದಾಯಕ ವಿಚಾರಗಳನ್ನು ಮನದಟ್ಟು ಮಾಡಿಸಬೇಕು ಎಂದು ಅವರು ಹೇಳಿದರು.
  ಇದೇ ವೇದಿಕೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅವರು ಗೌರವಿಸಿದರು. ಆದಶ ವಿದ್ಯಾರ್ಥಿಯಾಗಿ ಗುರುತಿಸಿಕೊಂಡ ಆದರ್ಶ ಪ್ರಸನ್ನ ಹೆಗಡೆಕಟ್ಟೆ ಅವರಿಗೆ ಸನ್ಮಾನಿಸಿ, ಶುಭ ಕೋರಿದರು. ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ, ವಿವಿಧ ಅಂಗಸAಸ್ಥೆಯ ಮುಖ್ಯಸ್ಥರಾದ ಮುಕ್ತಾ ಶಂಕರ್, ಗಣೇಶ ಭಟ್ಟ, ಪ್ರಸನ್ನ ಹೆಗಡೆ, ಲೆಕ್ಕಪರಿಶೋಧಕ ವಿಘ್ನೇಶ್ವರ ಗಾಂವ್ಕರ್, ಪ್ರಮುಖರಾದ ಪ್ರಕಾಶ ಭಟ್ಟ, ಆಸ್ಮಾ ಶೇಖ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *