ಯಲ್ಲಾಪುರ: ಇಡಗುಂದಿಯ ವಿಶ್ವದರ್ಶನ ಪ್ರೌಢ ಶಾಲೆಯಲ್ಲಿ ಭಾಷಾ ಸಂಘದ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬುಧವಾರ ಬಹುಮಾನ ವಿತರಿಸಲಾಯಿತು.
ಹಿಂದಿ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಮೋಹಿತ್ ಶಂಕರ್ ನಾರಾಯಣ ಗಾಂವ್ಕರ್ ಪ್ರಥಮ, ಹೃತ್ವಿಕ್ ಅರವಿಂದ ಹೆಬ್ಬಾರ್ ದ್ವಿತೀಯ, ಮಾನಸಾ ನಾಗರಾಜ್ ತೃತೀಯ ಸ್ಥಾನ ಪಡೆದರು. ಹಿಂದಿ ಭಾಷಣ ಸ್ಪರ್ಧೆಯಲ್ಲಿ ಬಾಲಚಂದ್ರ ಅನಂತ ದೇಸಾಯಿ ಪ್ರಥಮ, ಪಲ್ಲವಿ ಗೋಪಾಲಕೃಷ್ಣ ಭಟ್ಟ ದ್ವಿತೀಯ, ಮನೋಜ ಸುಬ್ರಾಯ ಭಟ್ಟ ತೃತೀಯ ಬಹುಮಾನ ಪಡೆದರು. ಚಿತ್ರಕಲಾ ಸ್ಪರ್ಧೆಯಲ್ಲಿ ಲಕ್ಷಿö್ಮ ಕೃಷ್ಣ ಪಟಗಾರ ಪ್ರಥಮ, ನಿಖಿತಾ ಮೋಹನ ಶೆಟ್ಟಿ ಹಾಗೂ ವಿಜೇತ ವಿಶ್ವನಾಥ ಭಟ್ಟ ದ್ವಿತೀಯ, ಸಹನಾ ಮಹಾಬಲೇಶ್ವರ ಭಟ್ಟ ಹಾಗೂ ಮೇಘಾ ವಿಶ್ವನಾಥ ಪಟಗಾರ ತೃತೀಯ ಸ್ಥಾನ ಪಡೆದರು. ಲೇಖನ ಸ್ಪರ್ಧೆಯಲ್ಲಿ ವಿಜೇತ ವಿಶ್ವನಾಥ ಭಟ್ಟ ಪ್ರಥಮ, ಅಶ್ವಿನಿ ರೂಪ ಗೌಡ, ಗಣೇಶ ಲಿಂಗಣ್ಣ ಗೌಡ ದ್ವಿತೀಯ ಹಾಗೂ ನಂದಿತಾ ಮಹೇಶ ಥಾಮ್ಸೆ, ಭಾರ್ಗವಿ ಸತ್ಯನಾರಾಯಣ ಭಟ್ಟ ಹಾಗೂ ಸುಬ್ರಮಣ್ಯ ದತ್ತಾತ್ರೇಯ ಭಟ್ಟ ತೃತೀಯ ಸ್ಥಾನವನ್ನು ಹಂಚಿಕೊoಡರು. ಮುಖ್ಯಾಧ್ಯಾಪಕರಾದ ಪ್ರಸನ್ನ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಮಮತಾಜ್ ಶೇಖ್ ಪ್ರಸ್ತಾಪಿಸಿದರು. ಶಿಕ್ಷಕ ರಾಘವೇಂದ್ರ ಹೆಗಡೆ ಕಾರ್ಯಕ್ರಮದಲ್ಲಿ ಇದ್ದರು. ಮೋಹಿತ್ ಗಾಂವ್ಕರ್ ಪ್ರಾರ್ಥಿಸಿದರು. ಪಲ್ಲವಿ ಭಟ್ಟ ನಿರ್ವಹಿಸಿದರು. ಅಶ್ವಿನಿ ಗೌಡ ವಂದಿಸಿದರು.