ಯಲ್ಲಾಪುರ: ರಾಖಿಯೂ ಬಂಧುತ್ವ, ಸಹೋದರತೆ, ಏಕತೆ ಹಾಗೂ ಸ್ನೇಹದ ಸಂಕೇತವಾಗಿದೆ ಎಂದು ಉಪನ್ಯಾಸಕ ಡಾ. ಡಿ.ಕೆ ಗಾಂವ್ಕರ್ ಹೇಳಿದರು.
ಅವರು ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರಕ್ಷಾ ಬಂಧನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಹೋದರತ್ವವನ್ನು ಸಾರುವ ರಾಖಿ ಪ್ರೀತಿಯ ಸಂಕೇತವಾಗಿದೆ. ತನ್ನನ್ನು ರಕ್ಷಿಸುವವರಿಗೆ ಯಾವ ವಿಘ್ನವೂ ಆಗದಿರಲಿ ಎಂಬ ಪ್ರಾರ್ಥನೆಯಿಂದ ರಕ್ಷೆಯನ್ನು ಕಟ್ಟಲಾಗುತ್ತದೆ. ರಾಖಿ ಹಬ್ಬವೂ ನಾವೇಲ್ಲರೂ ಒಂದೇ ಎಂಬ ಸಂದೇಶ ಸಾರುತ್ತದೆ. 1905ರಲ್ಲಿ ಹಿಂದು ಹಾಗೂ ಮುಸ್ಲಿಂ ಧರ್ಮಿಯರು ಪರಸ್ಪರ ರಾಖಿ ಕಟ್ಟಿಕೊಂಡು ಸಹೋದರತ್ವದ ಸಂದೇಶ ಸಾರಿದ್ದಾರೆ ಎಂದು ಅವರು ವಿವರಿಸಿದರು. ಅದರಂತೆ ಯಜ್ಞೋಪವೀತ, ಕಂಕಣಬದ್ಧ, ಮಾಂಗಲ್ಯ ಬಂಧನಗಳಿಗೂ ಹಿನ್ನಲೆಗಳಿವೆ ಎಂದು ತಿಳಿಸಿದರು. ದೀಶಾ ಭಟ್ಟ ಅವರು ಭಾರತಮಾತೆಯ ರೂಪ ಧರಿಸಿ ಗಮನ ಸೆಳೆದರು. ಸಿಂಚನಾ ಭಟ್ಟ ಪ್ರಾರ್ಥಿಸಿದರು. ಪ್ರತಿಮಾ ಭಟ್ಟ ಸ್ವಾಗತಿಸಿದರು. ಪಲ್ಲವಿ ಕೋಮಾರ್ ನಿರ್ವಹಿಸಿದರು. ಉಷಾ ಭಟ್ಟ ವಂದಿಸಿದರು. ಕವಿತಾ ಹೆಬ್ಬಾರ್ ಹಾಗೂ ಶ್ವೇತಾ ಗಾಂವ್ಕರ್ ಕಾರ್ಯಕ್ರಮ ಸಂಘಟಿಸಿದ್ದರು. ವಿದ್ಯಾರ್ಥಿಗಳು ಹಾಗೂ ಪಾಲಕರು ಆನ್ ಲೈನ್ ಮೂಲಕ ಕಾರ್ಯಕ್ರಮ ವೀಕ್ಷಿಸಿದರು.