ಯಲ್ಲಾಪುರ: ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ನಡೆದ “ರಂಗೋಲಿಯಲ್ಲಿ ಭಾರತ ನಕ್ಷೆ ಬಿಡಿಸುವ ಸ್ಪರ್ಧೆ” ಗಮನ ಸೆಳೆಯಿತು.
ರಂಗೋಲಿ ಪುಡಿಯ ಜೊತೆ ಅಕ್ಕಿ, ಗೋದಿ ಮೊದಲಾದ ಧಾನ್ಯಗಳನ್ನು ಬಳಸಿ ಮಕ್ಕಳು ಚಿತ್ರ ಬಿಡಿದರು. ನಂತರ ಸೂಚಿಸಲಾದ ಸ್ಥಳಗಳನ್ನು ಗುರುತು ಮಾಡಿದರು. ಸಮಾಜ ವಿಜ್ಞಾನ ಶಿಕ್ಷಕ ರಾಘವೇಂದ್ರ ಹೆಗಡೆ ಸ್ಪರ್ಧೆಯನ್ನು ನಡೆಸಿಕೊಟ್ಟರು. ೧೦ನೇ ತರಗತಿ ಪರೀಕ್ಷೆಗೆ ಪೂರಕವಾದ ಸ್ಪರ್ಧೆ ಇದಾಗಿದೆ. ಈ ಸ್ಪರ್ಧೆಯಲ್ಲಿ ಲಕ್ಷಿ ಕೃಷ್ಣ ಪಟಗಾರ ಪ್ರಥಮ, ಸಮೀಕ್ಷಾ ಸುರೇಶ ಮಹಾಲೆ ದ್ವಿತೀಯ, ಮೇಘಾ ವಿಶ್ವನಾಥ ಪಟಗಾರ ಹಾಗೂ ಪಲ್ಲವಿ ಗೋಪಾಲ ಭಟ್ಟ ತೃತೀಯ ಬಹುಮಾನ ಪಡೆದರು.