ಅಂಕೋಲಾ: ಲಸಿಕೆ ಪಡೆಯುವ ಮೂಲಕ ರೆಬೀಸ್ ರೋಗ ಹರಡುವಿಕೆಯನ್ನು ತಡೆಯಲು ಸಾಧ್ಯ ಎಂದು ಹೊನ್ನಾವರದ ಸೆಂಟ್ ಇಗ್ನೆಷಿಯಸ್ ಇನ್ಸಿಟ್ಯುಟ್ ಆಫ್ ಹೆಲ್ತ ಸೈನ್ಸನ ಪ್ರಾಚಾರ್ಯರಾದ ಎಸ್.ಆರ್ ಡಯನಾ ಅವರು ಹೇಳಿದರು.
ವಿಶ್ವ ರೇಬಿಸ್ ದಿನದ ಅಂಗವಾಗಿ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಜಾಗೃತಿ ಇದ್ದರೆ ರೆಬೀಸ್ ರೋಗದಿಂದ ರಕ್ಷಣೆ ಪಡೆಯಬಹುದಾಗಿದೆ. ಎಲ್ಲಾ ನಾಗರಿಕರು ಸ್ವಯಂ ರಕ್ಷಣೆಯ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು. ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಈ ರೋಗದಿಂದ ರಕ್ಷಿಸಿಕೊಳ್ಳಲು ಸಾದ್ಯವಿದೆ ಎಂದು ಅವರು ವಿವರಿಸಿದರು. ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ನ ಉಪ ಪ್ರಾಚಾರ್ಯರಾದ ದೀಪಾಲಿ ಕುರ್ಡೇಕರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯರಾದ ಶಂಕರಗೌಡ ಕಡೇಮನಿ ಸ್ವಾಗತಿಸಿದರು. ನಯನಾ ತಾಂಡೇಲ್ ನಿರ್ವಹಿಸಿದರು. ರಶ್ಮಿ ನಾಯಕ ವಂದಿಸಿದರು. ಆನ್ ಲೈನ್ ಮೂಲಕ ವಿದ್ಯಾರ್ಥಿಗಳು ಕಾರ್ಯಕ್ರಮ ವೀಕ್ಷಿಸಿದರು.