ಯಲ್ಲಾಪುರ: ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಮತದಾರರ ಸಾಕ್ಷರತೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲು ಸಭೆ ಹಾಗೂ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ನಂತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮನೋಜ ಸುಬ್ರಾಯ ಭಟ್ಟ ಪ್ರಥಮ, ಋತ್ವಿಕ್ ಅರವಿಂದಹೆಬ್ಬಾರ್ ದ್ವಿತೀಯ, ಭಾರ್ಗವಿ ಸತ್ಯನಾರಾಯಣ ಭಟ್ಟ ತೃತೀಯ ಬಹುಮಾನ ಪಡೆದರು. ಚಿತ್ರಕಲಾ ಸ್ಪರ್ಧೆಯಲ್ಲಿ ಸುಬ್ರಹ್ಮಣ್ಯ ನಾ ಭಟ್ಟ ಪ್ರಥಮ, ಮೇಘಾ ವಿಶ್ವನಾಥ ಪಟಗಾರ ದ್ವಿತೀಯ, ರಕ್ಷಾ ಪರಮೇಶ್ವರ ಗೌಡ ಹಾಗೂ ಪೃಥ್ವಿ ಸುಬ್ರಹ್ಮಣ್ಯ ಗಾಂವ್ಕಾರ್ ತೃತೀಯ ಬಹುಮಾನ ಪಡೆದರು. ಪ್ರಬಂಧ ಸ್ಪರ್ಧೆಯಲ್ಲಿ ಸಹನಾ ಮಹಾಬಲೇಶ್ವರ ಭಟ್ಟ ಪ್ರಥಮ, ಮನೋಜ ಸುಬ್ರಾಯ ಭಟ್ಟ ದ್ವಿತೀಯ ಹಾಗೂ ನಂದಿತಾ ಮಹೇಶ ತಾಮ್ಸೆ ತೃತೀಯ ಬಹುಮಾನ ಪಡೆದರು. ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಪ್ರಸನ್ನ ಜಿ ಹೆಗಡೆ ಬಹುಮಾನ ವಿತರಿಸಿದರು. ಶಿಕ್ಷಕ ರಾಘವೇಂದ್ರ ಎಸ್ ಹೆಗಡೆ ಮತದಾನ ಜಾಗೃತಿ ಕುರಿತು ಉಪನ್ಯಾಸ ನೀಡಿದರು.
- 16 Nov
- 2021