ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯಾದ “ವಿಶ್ವದರ್ಶನ ಸೇವಾ” ಆಯೋಜಿಸಿರುವ ಕಾಲ ಮಿತಿಯ ಯೋಗ ಶಿಬಿರಕ್ಕೆ ಸೋಮವಾರ ಇಲ್ಲಿನ ಸಂಸ್ಥೆಯ ಆವಾರದಲ್ಲಿ ಚಾಲನೆ ದೊರಕಿತು.
ಯೋಗ ಶಿಕ್ಷಕ ಸುಬ್ರಾಯ ಭಟ್ಟ ಹಾಗೂ ದಿವಾಕರ ಮರಾಠಿ ಯೋಗಾಭ್ಯಾಸದ ಮಹತ್ವದ ಕುರಿತು ಶಿಬಿರಾರ್ಥಿಗಳಿಗೆ ವಿವರಿಸಿದರು. ನಂತರ ಯೋಗ, ಪ್ರಾಣಾಯಾಮ ತರಬೇತಿ ನಡೆಸಿಕೊಟ್ಟರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಮುಖ್ಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಅವರು ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಖೈರುನ್ ಶೇಖ್ ಸ್ವಾಗತಿಸಿದರು. ವಿಶ್ವದರ್ಶನ ಸೇವಾ ತಂಡದ ಎಂ.ಆರ್ ಭಟ್ಟ ಇತರರು ಇದ್ದರು.