Archives: News

ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ನಲ್ಲಿ ವಿಶ್ವ ಆಹಾರ ದಿನಾಚರಣೆ

ಅಂಕೋಲಾ: ಇಲ್ಲಿನ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ನಲ್ಲಿ ವಿಶ್ವ ಆಹಾರ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.   “ಆರೋಗ್ಯಕರ ನಾಳೆಗಾಗಿ ಇಂದು ಸುರಕ್ಷಿತ ಆಹಾರ” ಎಂಬ ವಿಷಯದ ಕುರಿತು ಸಂಸ್ಥೆಯ ಉಪ ಪ್ರಾಚಾರ್ಯರಾದ ದೀಪಾಲಿ ಕುರ್ಡೇಕರ್ ಅವರು ಉಪನ್ಯಾಸ ನೀಡಿದರು. ಸುರಕ್ಷಿತ ಆಹಾರ ಉತ್ಪಾದನೆ ಹಾಗೂ ನಿಯಮಿತ ಸೇವನೆಯ ಬಗ್ಗೆ ಅವರು ವಿವರಿಸಿದರು. ಉತ್ತಮ ಆಹಾರದಿಂದ ಉತ್ತಮ ಆರೋಗ್ಯ ದೊರೆಯುತ್ತದೆ ಎಂದು ಅವರು ತಿಳಿಸಿದರು. ಸಂಸ್ಥೆಯ ಶಾಖಾ ಕಾರ್ಯನಿರ್ವಾಹಕರಾದ ಗುರುದತ್ತ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು….

Read More

ಲಾಕ್ ಡೌನ್ ನಿಂದ ಮಾನಸಿಕ ಸ್ಥಿತಿಯ ಮೇಲೆ ದುಷ್ಪರಿಣಾಮ

ಅಂಕೋಲಾ: ಲಾಕ್ ಡೌನ್ ಅವದಿಯೂ ಅನೇಕರ ಮಾನಸಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಹೊನ್ನಾವರದ ಎಂ.ಎಸ್.ಸಿ ಇನ್ ಸೈಕಿಯಾಟ್ರಿಕ್ ಸೆಂಟ್ ಇಗ್ನೆಷಿಯಸ್ ಇನ್ಸಿಟ್ಯುಟ್ ಆಫ್ ಹೆಲ್ತ್ ಸೈನ್ಸ್ ನ ಉಪನ್ಯಾಸಕರಾದ ಸ್ಮಿತಾ ಫೆರ್ನಾಂಡೆಸ್ ಹೇಳಿದರು.   ತಾಲೂಕಿನ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ನಲ್ಲಿ ಮಂಗಳವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೋವಿಡ್ ಆತಂಕದ ಕಾರಣದಿಂದ ಅನೇಕರು ಮಾನಸಿಕವಾಗಿ ಕುಗ್ಗಿದ್ದಾರೆ. ಲಾಕ್ ಡೌನ್ ಅವದಿಯಲ್ಲಿ ನಿತ್ಯದ ಚಟುವಟಿಕೆಗಳಿಂದ ದೂರ ಸರಿದವರು ಮಾನಸಿಕವಾಗಿ…

Read More

ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ನಲ್ಲಿ ಪ್ರಕೃತಿ ದಿನ

ಅಂಕೋಲಾ: ಇಲ್ಲಿನ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ನಲ್ಲಿ “ವಿಶ್ವ ಪ್ರಕೃತಿ ದಿನ” ಅಂಗವಾಗಿ ಸಭಾ ಕಾರ್ಯಕ್ರಮ ನಡೆಯಿತು.   ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಮಾಜಿಕ ಕಾರ್ಯಕರ್ತ ಕೆ.ಆರ್ ನಾಯಕ ಬೇಲಿಕೇರಿ ಮಾತನಾಡಿ, ಅಭಿವೃದ್ದಿಯ ಹೆಸರಿನಲ್ಲಿ ಪರಿಸರ ಸಂರಕ್ಷಣೆಯನ್ನು ಮರೆಯಬಾರದು ಎಂದು ಕರೆ ನೀಡಿದರು. ಸಂಸ್ಥೆಯ ಉಪ ಪ್ರಾಚಾರ್ಯರಾದ ದೀಪಾಲಿ ಕುರ್ಡೇಕರ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯರಾದ ಶಂಕರಗೌಡ ಕಡೆಮನೆ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಗುರುದತ್ತ ಬಿ ನಾಯಕ ಇದ್ದರು. ನಯನಾ ತಾಂಡೇಲ್ ಕಾರ್ಯಕ್ರಮ ನಿರ್ವಹಿಸಿದರು. ರಶ್ಮಿ ನಾಯಕ ವಂದಿಸಿದರು.

Read More

ಗಾಂಧೀ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮ

ಯಲ್ಲಾಪುರ: ಗಾಂಧೀ ಜಯಂತಿ ಹಾಗೂ ಲಾಲಬಹುದ್ದೂರ ಶಾಸ್ತಿç ಅವರ ಜನ್ಮದಿನದ ಅಂಗವಾಗಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವತಿಯಿಂದ ಪಟ್ಟಣ ಹಾಗೂ ಇಡಗುಂದಿ ಶಾಲೆಗಳಲ್ಲಿ ಭಜನೆ, ಸ್ವಚ್ಚತೆ ಹಾಗೂ ಸಭಾ ಕಾರ್ಯಕ್ರಮ ನಡೆಯಿತು.    ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆ, ಇಡಗುಂದಿ ಪ್ರೌಢಶಾಲೆ ಹಾಗೂ ಪಟ್ಟಣದ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆಗಳಲ್ಲಿ ಪ್ರತ್ಯೇಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಇಡಗುಂದಿಯ ಪ್ರೌಢಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಪ್ರಸನ್ನ ಹೆಗಡೆ ಅವರು ಗಾಂಧೀ…

Read More

ಅಂಕೋಲಾದ ವಿವಿಧಡೆ ಸ್ವಚ್ಚತಾ ಕಾರ್ಯಕ್ರಮ

ಅಂಕೋಲಾ: ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಜನ್ಮದಿನದ ಅಂಗವಾಗಿ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ಪಟ್ಟಣದ ವಿವಿಧಡೆ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.    ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ಶ್ರಮದಾನ ನಡೆಸಿದರು. ಇಲ್ಲಿನ ಕೆ.ಸಿ ರಸ್ತೆ, ತಾಲೂಕಾ ಆರೋಗ್ಯಾಧಿಕಾರಿ ಕಚೇರಿ, ತಾಲೂಕು ಆಸ್ಪತ್ರೆ ಮೊದಲಾದ ಕಡೆ ಸ್ವಚ್ಚತಾ ಕೆಲಸ ನಿರ್ವಹಿಸಲಾಯಿತು. ಕೆ.ಸಿ ರಸ್ತೆಯ ಅಂಚಿನಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಸ್ವಚ್ಚ ಮಾಡಲಾಯಿತು. ಇದಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಲೂಕಾ ಸಾರ್ವಜನಿಕ…

Read More

ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಯಲ್ಲಾಪುರ: ಇಡಗುಂದಿಯ ವಿಶ್ವದರ್ಶನ ಪ್ರೌಢ ಶಾಲೆಯಲ್ಲಿ ಭಾಷಾ ಸಂಘದ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬುಧವಾರ ಬಹುಮಾನ ವಿತರಿಸಲಾಯಿತು.    ಹಿಂದಿ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಮೋಹಿತ್ ಶಂಕರ್ ನಾರಾಯಣ ಗಾಂವ್ಕರ್ ಪ್ರಥಮ, ಹೃತ್ವಿಕ್ ಅರವಿಂದ ಹೆಬ್ಬಾರ್ ದ್ವಿತೀಯ, ಮಾನಸಾ ನಾಗರಾಜ್ ತೃತೀಯ ಸ್ಥಾನ ಪಡೆದರು. ಹಿಂದಿ ಭಾಷಣ ಸ್ಪರ್ಧೆಯಲ್ಲಿ ಬಾಲಚಂದ್ರ ಅನಂತ ದೇಸಾಯಿ ಪ್ರಥಮ, ಪಲ್ಲವಿ ಗೋಪಾಲಕೃಷ್ಣ ಭಟ್ಟ ದ್ವಿತೀಯ, ಮನೋಜ ಸುಬ್ರಾಯ ಭಟ್ಟ ತೃತೀಯ ಬಹುಮಾನ ಪಡೆದರು. ಚಿತ್ರಕಲಾ ಸ್ಪರ್ಧೆಯಲ್ಲಿ ಲಕ್ಷಿö್ಮ ಕೃಷ್ಣ…

Read More

ಹೃದಯ ಸಮಸ್ಯೆಗೆ ಜೀವನಶೈಲಿ ಸುದಾರಣೆ ಪರಿಹಾರ

ಅಂಕೋಲಾ: ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ಹೃದಯ ಸಂಬoಧಿ ಖಾಯಿಲೆಗಳಿಂದ ದೂರ ಇರಬಹುದು ಎಂದು ಮಣಿಪಾಲ ಕಾಲೇಜ ಆಫ್ ನರ್ಸಿಂಗ್ ಸಹಾಯಕ ಪ್ರಾದ್ಯಾಪಕರಾದ ಭಾರತಿ ಆರ್ ನಾಯಕ ಹೇಳಿದರು.  ಅವರು ಬುಧವಾರ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ನಲ್ಲಿ ನಡೆದ “ವಿಶ್ವ ಹೃದಯ ದಿನ” ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.      ಅನುವಂಶೀಯವಾಗಿ ಬರುವ ರೋಗಗಳ ಬಗ್ಗೆ ಈಚೆಗೆ ಜನ ನಿರ್ಲಕ್ಷö್ಯ ವಹಿಸುತ್ತಿದ್ದಾರೆ. ಯುವ ಸಮುದಾಯದವರು ಅನುವಂಶೀಯ ರೋಗಗಳ ಕುರಿತು ಅರಿವು ಹೊಂದಿರಬೇಕು. ಅದರಲ್ಲಿಯೂ ಮುಖ್ಯವಾಗಿ…

Read More

ಲಸಿಕೆಯಿಂದ ರೇಬಿಸ್ ತಡೆ

ಅಂಕೋಲಾ: ಲಸಿಕೆ ಪಡೆಯುವ ಮೂಲಕ ರೆಬೀಸ್ ರೋಗ ಹರಡುವಿಕೆಯನ್ನು ತಡೆಯಲು ಸಾಧ್ಯ ಎಂದು ಹೊನ್ನಾವರದ ಸೆಂಟ್ ಇಗ್ನೆಷಿಯಸ್ ಇನ್ಸಿಟ್ಯುಟ್ ಆಫ್ ಹೆಲ್ತ ಸೈನ್ಸನ ಪ್ರಾಚಾರ್ಯರಾದ ಎಸ್.ಆರ್ ಡಯನಾ ಅವರು ಹೇಳಿದರು.   ವಿಶ್ವ ರೇಬಿಸ್ ದಿನದ ಅಂಗವಾಗಿ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಜಾಗೃತಿ ಇದ್ದರೆ ರೆಬೀಸ್ ರೋಗದಿಂದ ರಕ್ಷಣೆ ಪಡೆಯಬಹುದಾಗಿದೆ. ಎಲ್ಲಾ ನಾಗರಿಕರು ಸ್ವಯಂ ರಕ್ಷಣೆಯ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು. ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಈ…

Read More

ಅನುಭವಗಳ ಹೆಚ್ಚಳಕ್ಕೆ ಪ್ರವಾಸ ಸೂಕ್ತ

ಯಲ್ಲಾಪುರ: ಅನುಭವಗಳ ಹೆಚ್ಚಳಕ್ಕಾಗಿ ಪ್ರವಾಸ ಮಾಡುವುದು ಸೂಕ್ತ ಎಂದು ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಪ್ರಸನ್ನ ಹೆಗಡೆ ಅವರು ಹೇಳಿದರು.   ಅವರು ಮಂಗಳವಾರ ಬೆಳಕಿನಂದ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ನೇತಾಜಿ ಸಮಾಜ ವಿಜ್ಞಾನಗಳ ಸಂಘದ ಆಶ್ರಯದಲ್ಲಿ ಇಡಗುಂದಿಯ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆ ಆವಾರದಲ್ಲಿ ನಡೆದ ವಿಶ್ವ ಪ್ರವಾಸೋಧ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋಶ ಓದು, ದೇಶ ಸುತ್ತು ಎಂಬ ಮಾತಿದೆ. ಅದರಂತೆ, ಉತ್ತಮ ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಪ್ರವಾಸಗಳನ್ನು ಮಾಡಿದಾಗ ಅನುಭವಗಳು ಹೆಚ್ಚುತ್ತವೆ…

Read More