Archives: News

ನರ್ಸಿಂಗ್ ವಿದ್ಯಾರ್ಥಿಗಳ ಬೀಳ್ಕೊಡುಗೆ

ಅಂಕೋಲಾ: ಇಲ್ಲಿನ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ನ 20ನೇ ಬ್ಯಾಚ್ ನ ವಿದ್ಯಾರ್ಥಿಗಳು ವೃತ್ತಿ ಜೀವನಕ್ಕೆ ಸಿದ್ಧಗೊಂಡಿದ್ದಾರೆ. ನರ್ಸಿಂಗ್ ಶಿಕ್ಷಣ ಪೂರ್ಣಗೊಳಿಸಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಆವಾರದಲ್ಲಿ ಬುಧವಾರ ಬೀಳ್ಕೊಡಲಾಯಿತು.   ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಉಪ ಪ್ರಾಚಾರ್ಯರಾದ ದೀಪಾಲಿ ಕುರ್ಡೇಕರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವೃತ್ತಿ ಜೀವನದಲ್ಲಿ ಪ್ರತಿಯೊಬ್ಬರು ಶಿಸ್ತು ಹಾಗೂ ಸಂಯಮವನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಂಸ್ಥೆಯ ಆಡಳಿತಾಧಿಕಾರಿಗಳಾದ ಗುರುದತ್ತ ಬಿ ನಾಯಕ ಅವರು ವೇದಿಕೆಯಲ್ಲಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ರಾಚಾರ್ಯರಾದ ಶಂಕರಗೌಡ…

Read More

ವಿಶ್ವದರ್ಶನದಲ್ಲಿ ವಿಶ್ವ ಶಾಂತಿ ದಿನಾಚರಣೆ

ಯಲ್ಲಾಪುರ: ಅಹಂಕಾರ ಹಾಗೂ ಅತೃಪ್ತಿಯನ್ನು ಅನುಭವಿಸುತ್ತಿರುವವರ ಮನಸ್ಥಿತಿ ಅಶಾಂತಿಯಿOದ ಕೂಡಿರುತ್ತದೆ. ಸರಳ, ಸಜ್ಜನಿಕೆಯ ವ್ಯಕ್ತಿತ್ವ ಶಾಂತಿಯನ್ನು ಪ್ರತಿಪಾದಿಸುತ್ತದೆ ಎಂದು ಬ್ರಹ್ಮ ಕುಮಾರಿ ಈಶ್ವರೀಯ ವಿದ್ಯಾಲಯದ ಬಿ.ಕೆ ಶಿವಲೀಲಾ ಅವರು ಹೇಳಿದರು.  ಅವರು ಮಂಗಳವಾರ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನಡೆದ “ವಿಶ್ವ ಶಾಂತಿ ದಿನಾಚರಣೆ” ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.  ಶಾಂತಿ ಎಂಬುದು ಎರಡು ಅಕ್ಷರದ ಪದವಾಗಿದ್ದರೂ ಅಪಾರವಾದ ಮೌಲ್ಯವನ್ನು ಹೊಂದಿದೆ. ಇತಿಹಾಸವನ್ನು ಗಮನಿಸಿದಾಗ ಅಹಂಕಾರ ಹಾಗೂ ಅತೃಪ್ತಿಯನ್ನು ಅನುಭವಿಸಿದವರು ಹೆಚ್ಚಿನ ಪ್ರಮಾಣದಲ್ಲಿ ಅಶಾಂತಿಗೆ ಕಾರಣರಾಗಿದ್ದಾರೆ. ನಕಾರಾತ್ಮಕ ವಿಷಯಗಳಲ್ಲಿ…

Read More

ಪ್ರೇಕ್ಷಕರನ್ನು ರಂಜಿಸಿದ ತಾಳಮದ್ದಲೆ

ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆ ಆವರದಲ್ಲಿ ಶನಿವಾರ ನಡೆದ “ಜಾಂಬವತಿ ಕಲ್ಯಾಣ” ಯಕ್ಷಗಾನ ತಾಳಮದ್ದಲೆ ಕಲಾಭಿಮಾನಿಗಳನ್ನು ರಂಜಿಸಿತು.     ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಶ್ರಯದಲ್ಲಿ ಈ ತಾಳಮದ್ದಲೆ ಆಯೋಜಿಸಲಾಗಿತ್ತು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ನಡೆದ ತಾಳಮದ್ದಲೆ ಕಾರ್ಯಕ್ರಮದಲ್ಲಿ ಹಿಮ್ಮೇಳದಲ್ಲಿ ಅನಂತ ಹೆಗಡೆ ದಂತಳಿಗೆ ಭಾಗವತರಾಗಿ ಹಾಗೂ ನರಸಿಂಹ ಭಟ್ಟ ಹಂಡ್ರಮನೆ ಮದ್ದಳೆ ವಾದಕರಾಗಿ ಕಾರ್ಯ ನಿರ್ವಹಿಸಿದರು. ಬಲರಾಮನ ಪಾತ್ರದಲ್ಲಿ ಡಾ. ಡಿ.ಕೆ…

Read More

ಇಂಗಿತ ಕವನ ಸಂಕಲನ ಬಿಡುಗಡೆ

ಯಲ್ಲಾಪುರ: ಪ್ರತಿಯೊಬ್ಬರು ತಮ್ಮಲ್ಲಿ ಇರುವ ಜ್ಞಾನವನ್ನು ಇತರರಿಗೆ ಹಂಚುವ ಮೂಲಕ ಅದನ್ನು ವೃದ್ದಿಸಿಕೊಳ್ಳಬೇಕು ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ನರಸಿಂಹ ಕೋಣೆಮನೆ ಹೇಳಿದರು.    ಅವರು ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ನಡೆದ ಶಿಕ್ಷಕ ಡಾ. ನವೀನ ಕುಮಾರ ಎ.ಜಿ ರಚಿತ “ಇಂಗಿತ ಒಂದು ಮನಸಿನ ಭಾವ” ಎಂಬ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.      ಪ್ರತಿಯೊಬ್ಬರಲ್ಲಿಯೂ ಒಂದೊOದು ರೀತಿಯ ಜ್ಞಾನವಿರುತ್ತದೆ. ಅದನ್ನು ಇತರರಿಗೆ ಹಂಚಿದಾಗ…

Read More

ಧ್ಯಾನ ಶಿಬಿರ ಮುಕ್ತಾಯ

ಯಲ್ಲಾಪುರ: ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲಾ ಆವರದಲ್ಲಿ ಹಮ್ಮಿಕೊಂಡಿದ್ದ ಧ್ಯಾನ ಶಿಬಿರ ಮುಕ್ತಾಯವಾಗಿದೆ.   ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಂಗಸOಸ್ಥೆಯಾದ ವಿಶ್ವದರ್ಶನ ಸೇವಾ ವತಿಯಿಂದ ಸೋಮವಾರದಿಂದ ಗುರುವಾರದ ವರೆಗೆ ಐದು ದಿನಗಳ ಧ್ಯಾನ ಶಿಬಿರ ಆಯೋಜಿಸಲಾಗಿತ್ತು. ಇದರ ಸಮಾರೋಪ ಕಾರ್ಯಕ್ರಮದಲ್ಲಿ ಧ್ಯಾನ ತರಬೇತಿ ನೀಡಿದ ಬೆಂಗಳೂರಿನ ಮಹರ್ಷಿ ವೇದ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರಾದ ಅನಂತ ಭಟ್ಟ ಶೀಗೇಪಾಲ್ ಅವರನ್ನು ಗೌರವಿಸಲಾಯಿತು. ಇಡಗುಂದಿ ಗ್ರಾಮ ಪಂಚಾಯತ ಸದಸ್ಯರಾದ ವಿ.ಎನ್ ಭಟ್ಟ ಏಕಾನ್, ಸಾಮಾಜಿಕ ಕಾರ್ಯಕರ್ತರಾದ ಪ್ರೇಮಾನಂದ ನಾಯ್ಕ, ವಿಶ್ವದರ್ಶನ ಸೇವಾ ತಂಡದ…

Read More

ಹಿಂದಿ ದಿವಸ್ ಕುರಿತು ಅರಿವು

ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವರದಲ್ಲಿ ಹಿಂದಿ ದಿವಸ್ ಆಚರಿಸಲಾಯಿತು.  ಉಪನ್ಯಾಸಕರಾದ ಮುಬೀನಾ ಶೇಖ ಹಾಗೂ ಗೋಕುಲ್ ಗೌಡ ಹಿಂದಿ ವಿಷಯದ ಕುರಿತು ಮಾಹಿತಿ ನೀಡಿದರು. ಹಿಂದಿ ದಿವಸ್ ಆಚರಣೆಯ ಹಿನ್ನಲೆ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.

Read More

ಇಡಗುಂದಿಯಲ್ಲಿ ಧ್ಯಾನ ಶಿಬಿರ

ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ವಿಶ್ವದರ್ಶನ ಸೇವಾ ವತಿಯಿಂದ ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಧ್ಯಾನ ಶಿಬಿರ ನಡೆಯುತ್ತಿದೆ.    ಭಾನುವಾರ ಸಂಜೆಯಿoದ ಈ ಶಿಬಿರ ಶುರುವಾಗಿದೆ. ಬೆಂಗಳೂರಿನ ಮಹರ್ಷಿ ವೇದ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರಾದ ಅನಂತ ಭಟ್ಟ ಶೀಗೇಪಾಲ್ ಅವರು ಧ್ಯಾನ ತರಬೇತಿ ನೀಡುತ್ತಿದ್ದಾರೆ. ಐದು ದಿನಗಳ ಕಾಲ ಸಂಜೆ 5.30ರಿಂದ 7.30ರ ವರೆಗೆ ಧ್ಯಾನ ಶಿಬಿರ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಇಡಗುಂದಿ ಸೇವಾ ಸಹಕಾರಿ ಸಂಘದ ನಿರ್ದೇಶಿಕರಾದ ಪ್ರೇಮಾನಂದ ನಾಯ್ಕ…

Read More

ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಸಂಸ್ಕೃತ ಪಾಠ ಪ್ರಾರಂಭೋತ್ಸವ

ಯಲ್ಲಾಪುರ: ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾರದಾಂಬಾ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಸಂಸ್ಕೃತ ಬೋಧನೆ ಶುರು ಮಾಡಲಾಗಿದೆ.    ಬುಧವಾರ ಸಂಸ್ಕೃತ ಪಾಠ ಪ್ರಾರಂಭೋತ್ಸವ ನಡೆಯಿತು. ಸ್ವರ್ಣವಲ್ಲಿ ಶ್ರೀ ರಾಜರಾಜೇಶ್ವರಿ ಮಹಾವಿದ್ಯಾಲಯದ ವೇದ ಪ್ರಾಧ್ಯಾಪಕರಾದ ಡಾ. ನಾಗರಾಜ ಭಟ್ಟ ಕೋಣೆಮನೆ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವೇದದಿಂದ ಅನೇಕ ಗೃಂಥಗಳು ಉದ್ಬವವಾಗಿದೆ. ವೇದದ ಅಂತರಾತ್ಮ ತಿಳಿಯಲು ಸಂಸ್ಕೃತ ಭಾಷೆ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾರದಾಂಬಾ ದೇವಾಲಯ ಅಧ್ಯಕ್ಷರಾದ ಡಿ.ಶಂಕರ್ ಭಟ್ಟ ಅವರು ಮಾತನಾಡಿ, ಸಂಸ್ಕೃತವು…

Read More

ಗುರುವಿಗೆ ಮಹತ್ವದ ಸ್ಥಾನ ನೀಡಿದ ಭಾರತೀಯ ಪರಂಪರೆ

ಯಲ್ಲಾಪುರ: ಭಾರತೀಯ ಪರಂಪರೆಯಲ್ಲಿ ಸಾವಿರಾರು ವರ್ಷಗಳ ಹಿಂದಿನಿOದಲೂ ಗುರುವಿಗೆ ಮಹತ್ವದ ಸ್ಥಾನವಿದೆ. ಮಕ್ಕಳಲ್ಲಿ ಸದ್ಗುಣ, ವಾತ್ಸಲ್ಯ, ಗುರುಭಕ್ತಿ ಎಲ್ಲವನ್ನು ರೂಡಿಸುವ ಹೊಣೆಗಾರಿಗೆ ಶಿಕ್ಷಕರ ಮೇಲಿದೆ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ ಅವರು ಹೇಳಿದರು.   ಅವರು ಮಂಗಳವಾರ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಆನ್ ಲೈನ್ ಮೂಲಕ ಭಾಗವಹಿಸಿ ಆಶೀರ್ವಚನ ನೀಡಿದರು.     ಮೊದಲಿನಿಂದಲೂ ಭಾರತ ಗುರು ಪೂರ್ಣಿಮೆಯ ಮೂಲಕ ಗುರುವನ್ನು ಆರಾಧಿಸುತ್ತ ಬಂದಿದೆ….

Read More

ಪ್ರೇಮಾ ಗಾಂವ್ಕರ್ ಅವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಯಲ್ಲಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ನೀಡುವ ತಾಲೂಕಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕಿ ಪ್ರೇಮಾ ಗಾಂವ್ಕರ್ ಅವರಿಗೆ ಲಭಿಸಿದೆ. ಸೆ. 5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಂದು ಈ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.   ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಕಳೆದ 16 ವರ್ಷಗಳಿಂದ ಇವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2019-19 ಹಾಗೂ 2019-20ರಲ್ಲಿ ಆಂಗ್ಲ ಭಾಷೆಯ ಫಲಿತಾಂಶ ಹೆಚ್ಚಳಕ್ಕಾಗಿ ಶ್ರಮಿಸಿದ ಕಾರಣ ಇವರಿಗೆ ಶಿಕ್ಷಣ ಆಯುಕ್ತರ ಕಚೇರಿ ವತಿಯಿಂದ…

Read More