ಯಲ್ಲಾಪುರ: ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ನೇತಾಜಿ ಸಮಾಜ ವಿಜ್ಞಾನ ಸಂಘದ ಅಡಿಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತೀಯ ಸಂವಿಧಾನದ ಮಹತ್ವದ ಕುರಿತು ಮಕ್ಕಳಿಗೆ ಅರಿವು ಮೂಡಿಸಲಾಯಿತು. ಶಾಲೆಯ ಮುಖ್ಯಾಧ್ಯಾಪಕರಾದ ಪ್ರಸನ್ನ ಹೆಗಡೆ ಅವರು ಸಂವಿಧಾನದ ಅಗತ್ಯತೆ, ಸಂವಿಧಾನದ ಶ್ರೇಷ್ಠತೆಯ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳಾದ ಮಹೇಶ ಗೌಡ, ಅನನ್ಯ ನಾಯ್ಕ, ವಿಜೇತಾ ಭಟ್ಟ ಹಾಗೂ ವಾಗೀಶ ಭಟ್ಟ ಅವರು ಸಂವಿಧಾನದ ಲಕ್ಷಣ, ಮೂಲಭೂತ ಹಕ್ಕು ವಿಷಯದ ಕುರಿತು ಮಾತನಾಡಿದರು. ವಿನಯ ನಾಯ್ಕ ಸ್ವಾಗತಿಸಿದರು. ರಮ್ಯಾ ಮಡಿವಾಳ…
Read Moreಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯ 2021-22ನೇ ಸಾಲಿನ ಬಿ.ಇಡಿ ಪ್ರವೇಶ ಪ್ರಕ್ರಿಯೆ ಶುರುವಾಗಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಹಾಗೂ ಆಡಳಿತ ಮಂಡಳಿಯ ಕೋಟಾ ಅಡಿ 100 ಅಭ್ಯರ್ಥಿಗಳ ಪ್ರವೇಶಕ್ಕೆ ಅವಕಾಶವಿದ್ದು, ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ಬಿ.ಎ, ಬಿ.ಕಾಂ, ಬಿ.ಬಿಎ ಅಥವಾ ಬಿ.ಸಿ.ಎ ಪದವಿ ಪೂರೈಸಿರಬೇಕು. ಈ ವರ್ಷದಿಂದ ಬಿ.ಇ ಉತ್ತಿರ್ಣರಾದವರು ಸಹ ಪ್ರವೇಶ ಪಡೆಯಬಹುದಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪದವಿಯಲ್ಲಿ ಕನಿಷ್ಠ ಶೇ. 50ರಷ್ಟು ಅಂಕ ಪಡೆದಿರಬೇಕು. ಪರಿಶಿಷ್ಟ ಸಮುದಾಯ, ಪ್ರವರ್ಗ-1…
Read Moreಯಲ್ಲಾಪುರ: ಕನಕ ಜಯಂತಿ ಅಂಗವಾಗಿ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಸೋಮವಾರ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ ಹರಿಕಥೆ ಗಮನ ಸೆಳೆಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಕನ್ನಡ ಜಾಗೃತ ಸಮಿತಿ ಯಲ್ಲಾಪುರ ಹಾಗೂ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಥಾಕೀರ್ತನ ಕೋವಿದ ಸಿರಿವಿಠ್ಠಲ ಅಂಕಿತ ಈಶ್ವರದಾಸ ಕೊಪ್ಪೇಸರ ಅವರು `ಭಕ್ತ ಕನಕದಾಸ’ ಕಥಾ ಕಾಲಕ್ಷೇಪ ಎಂಬ ಹರಿಕಥೆಯನ್ನು ನಡೆಸಿಕೊಟ್ಟರು. ರಾಮಚಂದ್ರ ಹೆಗಡೆ ಕೋಣೆಸರ ಅವರು ಹಾರ್ಮೋನಿಯಂ ಹಾಗೂ ಪ್ರದೀಪ…
Read Moreಯಲ್ಲಾಪುರ: ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಮತದಾರರ ಸಾಕ್ಷರತೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲು ಸಭೆ ಹಾಗೂ ಕಾರ್ಯಕ್ರಮ ನಡೆಯಿತು.ಸಭಾ ಕಾರ್ಯಕ್ರಮದ ನಂತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮನೋಜ ಸುಬ್ರಾಯ ಭಟ್ಟ ಪ್ರಥಮ, ಋತ್ವಿಕ್ ಅರವಿಂದಹೆಬ್ಬಾರ್ ದ್ವಿತೀಯ, ಭಾರ್ಗವಿ ಸತ್ಯನಾರಾಯಣ ಭಟ್ಟ ತೃತೀಯ ಬಹುಮಾನ ಪಡೆದರು. ಚಿತ್ರಕಲಾ ಸ್ಪರ್ಧೆಯಲ್ಲಿ ಸುಬ್ರಹ್ಮಣ್ಯ ನಾ ಭಟ್ಟ ಪ್ರಥಮ, ಮೇಘಾ ವಿಶ್ವನಾಥ ಪಟಗಾರ ದ್ವಿತೀಯ, ರಕ್ಷಾ ಪರಮೇಶ್ವರ ಗೌಡ ಹಾಗೂ ಪೃಥ್ವಿ ಸುಬ್ರಹ್ಮಣ್ಯ ಗಾಂವ್ಕಾರ್ ತೃತೀಯ ಬಹುಮಾನ ಪಡೆದರು….
Read Moreಯಲ್ಲಾಪುರ: ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಗುರುನಾನಕ್ ಜಯಂತಿಯನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಶಿಕ್ಷಕಿ ಡಾ. ಕವಿತಾ ಹೆಬ್ಬಾರ್, ಸಿಖ್ಖರ ಪ್ರಥಮ ಗುರುವಾಗಿದ್ದ ಗುರುನಾನಕ್ ಅವರು ಶಾಂತಪೂರ್ಣ ಸ್ವಭಾವದವರಾಗಿದ್ದರು. ಹೀಗಾಗಿ ಎಲ್ಲಾ ಧರ್ಮೀಯರು ಅವರನ್ನು ಗೌರವಿಸುತ್ತಿದ್ದರು. ಸಮಾನತೆ, ಭ್ರಾತೃತ್ವದ ಸಂಕೇತವಾಗಿ ಅವರು ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು. ಗುರುನಾನಕ್ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಾದ ಪ್ರಥ್ವಿ ಜೋಶಿ, ಅನುಷಾ ಭಟ್ಟ, ಪ್ರಜ್ಞಾ ಮಡಿವಾಳ, ಸಿಮ್ರಾನ್ ಶೇಖ್, ಲಕ್ಷಿö್ಮ ಪಟಗಾರ, ಅಕ್ಷತಾ ಭಾಗ್ವತ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವದರ್ಶನ ಕನ್ನಡ…
Read Moreಯಲ್ಲಾಪುರ: ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಮೋಸ ಮಾಡುವವರ ಸಂಖ್ಯೆ ಈಚೆಗೆ ಹೆಚ್ಚಾಗಿದ್ದು ಜನ ಜಾಗೃತರಾಗಿರಬೇಕು ಎಂದು ಯಲ್ಲಾಪುರ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಿಯಾಂಕ ಗೌಡ ಹೇಳಿದರು.ಅವರು ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸೈಬರ್ ಅಪರಾಧ ತಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಈಚೆಗೆ ಆನ್ ಲೈನ್ ಮೂಲಕ ವಂಚಿಸುವವರ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸಿಕೊಂಡು ಕೆಲವರು ವಂಚನೆ ಮಾಡುತ್ತಿದ್ದಾರೆ. ಈ ಕೃತ್ಯ ಎಸೆಗುವವರನ್ನು ಪತ್ತೆ ಮಾಡಲು ಪೊಲೀಸ್ ಇಲಾಖೆ ಶ್ರಮಿಸುತ್ತಿದೆ. ಆನ್ ಲೈನ್ ಮೂಲಕ ಹಣಕ್ಕೆ…
Read Moreಯಲ್ಲಾಪುರ: ಶಿಕ್ಷಣ ಪ್ರೇಮಿಯಾಗಿದ್ದ ಗಜಾನನ ಭಟ್ಟ ಅವರು ಬುಧವಾರ ನಿಧನರಾಗಿದ್ದಾರೆ. ಅವರ ನಿಧನಕ್ಕೆ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಕಂಬನಿ ಮಿಡಿದಿದೆ.ಗಜಾನನ ಭಟ್ಟ ಅವರು ಯಲ್ಲಾಪುರ ತಾಲೂಕಾ ಶಿಕ್ಷಣ ಸಮಿತಿ (ವೈ.ಟಿ.ಎಸ್.ಎಸ್)ನ ಅಧ್ಯಕ್ಷರಾಗಿದ್ದರು. ತಮ್ಮ ಇಳಿ ವಯಸ್ಸಿನಲ್ಲಿ ಸಹ ಅವರು ಶೈಕ್ಷಣಿಕ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದರು. ಬಡ ಮಕ್ಕಳ ಕುರಿತು ಅಪಾರ ಕಾಳಜಿ ಹೊಂದಿದ್ದರು. ಗ್ರಾಮೀಣ ಭಾಗದ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು. ಅವರ ನಿಧನದಿಂದ ಶಿಕ್ಷಣ ಕ್ಷೇತ್ರಕ್ಕೆ ನಷ್ಟವಾಗಿದೆ ಎಂದು ವಿಶ್ವದರ್ಶನ ಸಂಸ್ಥೆಯ…
Read Moreಯಲ್ಲಾಪುರ: ಎಲ್ಲಾ ರೀತಿಯ ರೋಗಗಳನ್ನು ದೂರ ಮಾಡುವ ಶಕ್ತಿ ಗಿಡ ಮೂಲಿಕೆಗಳಿಗಿವೆ. ವಿದ್ಯಾರ್ಥಿಗಳು ಸಸ್ಯ ಪ್ರಬೇಧ ಹಾಗೂ ಅವುಗಳ ಔಷಧೀಯ ಸತ್ವದ ಬಗ್ಗೆ ಅರಿವು ಹೊಂದಿರಬೇಕು ಎಂದು ಇಡಗುಂದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಾಧ್ಯಪಕರಾದ ಗಣಪತಿ ಗೌಡ ಹೇಳಿದರು. ಅವರು ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಸಮೃದ್ಧಿ ಇಕೋ ಕ್ಲಬ್ ವತಿಯಿಂದ ನಡೆದ “ಧನ್ವಂತರಿ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಯುರ್ವೇದ ಚಿಕಿತ್ಸಾ ಪದ್ದತಿಯಿಂದ ಎಲ್ಲಾ ರೋಗಗಳ ಪರಿಹಾರ ಸಾಧ್ಯ. ಆಯುರ್ವೇದದಿಂದ ಆರೋಗ್ಯದ ಮೇಲೆಯೂ ಯಾವುದೇ ದುಷ್ಪರಿಣಾಮಗಳಿಲ್ಲ…
Read Moreಯಲ್ಲಾಪುರ: ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳು ಗಮನ ಸೆಳೆದವು. ಜನ ಜಾಗೃತಿಗಾಗಿ ನಡೆದ ಬೀದಿ ನಾಟಕ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಇದಕ್ಕೂ ಮುನ್ನ ಕನ್ನಡ ನಾಡಿನ ಹಿರಿಯರ ವೇಷ ಭೂಷಣಗಳೊಂದಿಗೆ ಮಕ್ಕಳು ಮೆರವಣಿಗೆ ನಡೆಸಿದರು. ಅಖಿಲ ಭಾರತ ಸಾಹಿತ್ಯ ಪರಿಷದ್ ನ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಘುನಂದನ್ ಭಟ್ಟ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ,…
Read Moreಯಲ್ಲಾಪುರ: ಇಲ್ಲಿನ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ “ಲಕ್ಷ ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ” ಕಾರ್ಯಕ್ರಮ ನಡೆಯಿತು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಸಾವಿರಾರು ವಿದ್ಯಾರ್ಥಿಗಳು ಏಕಕಾಲಕ್ಕೆ ಸರ್ಕಾರ ನಿಗದಿ ಪಡಿಸಿದ ಗಾಯನಗಳನ್ನು ಪ್ರಸ್ತುತ ಪಡಿಸಿದರು. ಸಭಾ ಕಾರ್ಯಕ್ರಮವನ್ನು ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದಾದ ನಂತರ ಮಕ್ಕಳು ಕನ್ನಡದಲ್ಲಿ ಮಾತನಾಡುವ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತರಾಜ್ ಇಲಾಖೆಯ ರಾಜ್ಯ ವಿಕೇಂದ್ರಿಕರಣ ಯೋಜನೆಯ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ ಅವರು…
Read More