Archives: News

ಯಶಸ್ಸಿಗೆ ಶಿಸ್ತು ಹಾಗೂ ಶ್ರದ್ಧೆ ಅಗತ್ಯ

ಯಲ್ಲಾಪುರ: ನಾವು ಮಾಡುವ ಕೆಲಸವನ್ನು ಪ್ರೀತಿ ಹಾಗೂ ಶ್ರದ್ಧೆಯಿಂದ ಮಾಡಿದಾಗ ಯಶಸ್ಸು ಸಾಧ್ಯ ಎಂದು ನಿವೃತ್ತ ತಹಶೀಲ್ದಾರ್ ಡಿ.ಜಿ ಹೆಗಡೆ ಹೇಳಿದರು.   ಶುಕ್ರವಾರ ಅವರು ವಿಶ್ವದರ್ಶನ ಶಿಕ್ಷಣ ಮಹಾ ವಿದ್ಯಾಲಯ (ಬಿ.ಇಡಿ)ದಲ್ಲಿ ನಡೆದ ವಾರ್ಷಿಕ ಕ್ರೀಡಾ ಹಾಗೂ ಸಾಂಸ್ಕೃತಿಕ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.  ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾಗಿದ್ದು, ಉತ್ತಮ ಸಮಾಜವನ್ನು ರೂಪಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ. ವೃತ್ತಿ ಜೀವನದಲ್ಲಿ ಎಲ್ಲರೂ ಮಾನವೀಯ ನೆಲೆಯಲ್ಲಿ ಕೆಲಸ ಮಾಡಬೇಕು. ಜೀವನದಲ್ಲಿ ಪ್ರತಿಯೊಬ್ಬರಿಗೂ ಶಿಸ್ತು ಅಗತ್ಯ….

Read More

ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣದ ಬಗ್ಗೆ ಅರಿವು ಅಗತ್ಯ

ಯಲ್ಲಾಪುರ: ಪಠ್ಯ ಚಟುವಟಿಕೆಗಳಿಗಿಂತ ಶಾಲೆಗಳಲ್ಲಿ ಕಲಿಸುವ ಜೀವನ ಶಿಕ್ಷಣ ಅಮೂಲ್ಯವಾದದ್ದು ಎಂದು ಶಿಕ್ಷಣ ಪ್ರೇಮಿ ನಾರಾಯಣ ಹೆಗಡೆ ಗಡಿಕೈ ಅವರು ಹೇಳಿದರು.   ಪಟ್ಟಣದ ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.    ಕೇವಲ ಪುಸ್ತಕಗಳನ್ನು ಓದುವುದರಿಂದ ಎಲ್ಲ ರೀತಿಯ ಶಿಕ್ಷಣ ದೊರೆಯುವುದಿಲ್ಲ. ಶಾಲಾ ಹಂತದಲ್ಲಿ ಜೀವನ ಶಿಕ್ಷಣ ಒದಗಿಸುವ ಅಗತ್ಯವಿದೆ. ಬಾಲ್ಯದಲ್ಲಿಯೇ ಪಡೆದ ಶಿಕ್ಷಣ ಶಾಶ್ವತವಾಗಿರುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಸ್ಪೂರ್ತಿದಾಯಕ ವಿಚಾರಗಳನ್ನು ಕಲಿಸಬೇಕು. ಸಾಧಕರ…

Read More

ಸಂಸ್ಕೃತ – ಹಳೆಗನ್ನಡ ಸಾಹಿತ್ಯದ ಮಜಲುಗಳಿಗೆ ಸಾಕ್ಷಿಯಾದ ಅಷ್ಟಾವಧಾನ

ಯಲ್ಲಾಪುರ: ಏಕಕಾಲಕ್ಕೆ ಅನೇಕ ವಿಷಯಗಳಲ್ಲಿ ಲಕ್ಷ್ಯವನ್ನು ಕೇಂದ್ರಿಕರಿಸುವ ಕಲೆಯನ್ನು ಆಹ್ವಾಧಿಸುವ ಅಪರೂಪದ “ಅಷ್ಟಾವಧಾನ” ಕಾರ್ಯಕ್ರಮ ನಾಯ್ಕನಕೆರೆಯ ಶಾರದಾಂಬಾ ದೇವಿ ಭವನದಲ್ಲಿ ಬುಧವಾರ ನಡೆಯಿತು.    ಅವಧಾನಿ ಗಣೇಶ ಕೊಪ್ಪಲತೋಟ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆ ಅವರು, ಅಷ್ಟಾವಧಾನದ ಪರಿಚಯ ಹಾಗೂ ವಿಶೇಷತೆಗಳ ಬಗ್ಗೆ ಸಭೆಗೆ ತಿಳಿಸಿದರು. ಅಷ್ಟಾವಧಾನ ಸಾಹಿತ್ಯ ಕ್ಷೇತ್ರಕ್ಕೆ ಸಂಬoಧಿಸಿದ್ದಾಗಿದ್ದು, ಪದಗಳ ನಡುವಿನ ಸವಾಲಿನ ಆಟವಾಗಿದೆ. ನಿಷೇಧಾಕ್ಷರಿ, ಸಮಸ್ಯಾಪೂರ್ಣ, ದತ್ತಪದಿ, ಚಿತ್ರ ಕವಿತೆ, ಆಶು ಕವಿತೆ, ಕಾವ್ಯ ವಾಚನ, ಸಂಖ್ಯಾಬoಧ ಹಾಗೂ ಅಪ್ರಸ್ತುತ ಪ್ರಸಂಗ…

Read More

ಗಮನ ಸೆಳೆದ ಪರಿಸರ ಸ್ನೇಹಿ ಪುಷ್ಪಗುಚ್ಚ ಪ್ರದರ್ಶನ

ಯಲ್ಲಾಪುರ: ಸ್ಥಳೀಯವಾಗಿ ದೊರೆಯುವ ವಸ್ತುಗಳಿಂದ ವಿದ್ಯಾರ್ಥಿಗಳು ತಯಾರಿಸಿದ ಪುಷ್ಪಗುಚ್ಚಗಳು ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಗಮನ ಸೆಳೆದವು.ವಿಜ್ಞಾನ ವೇದಿಕೆ ಅಡಿ ಮಂಗಳವಾರ ಪರಿಸರ ಸ್ನೇಹಿ ಪುಷ್ಪಗುಚ್ಚ ಪ್ರದರ್ಶನ ಕಾರ್ಯಕ್ರಮ ನಡೆಸಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. 40ಕ್ಕೂ ಅಧಿಕ ಮಕ್ಕಳು ತಮ್ಮ ಮನೆಯ ಸುತ್ತ ಬೆಳೆಯುವ ಹೂವುಗಳನ್ನು ಸಂಗ್ರಹಿಸಿ ಬಗೆ ಬಗೆಯ ಚಿತ್ತಾರ ರಚಿಸಿದ್ದರು. ಅಡಿಕೆ ಹಾಳೆ, ತೆಂಗಿನಗರಿ, ವಿವಿಧ ಎಲೆಗಳು ಹಾಗೂ ಬಗೆ ಬಗೆಯ ಹೂವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಪುಷ್ಪಗುಚ್ಚ ತಯಾರಿಸಿದ್ದರು. ವಿಜ್ಞಾನ ಶಿಕ್ಷಕಿ ಲತಾ ಹೆಗಡೆ ಇವರಿಗೆ…

Read More

ಶಾರದಾಂಬಾ ದೇವಿ ಭವನದಲ್ಲಿ ವಿಶ್ವದರ್ಶನದಿಂದ ಅಷ್ಟಾವಧಾನ

ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಮಹಾ ವಿದ್ಯಾಲಯ (ಬಿ.ಇಡಿ) ವತಿಯಿಂದ ನಾಯ್ಕನಕೆರೆಯ ಶಾರದಾಂಬಾ ದೇವಾಲಯದ ಆವಾರದಲ್ಲಿ ಜನವರಿ 26ರಂದು ಬೆಳಗ್ಗೆ 10ಗಂಟೆಗೆ “ಅಷ್ಟಾವಧಾನ” ಕಾರ್ಯಕ್ರಮ ನಡೆಯಲಿದೆ.      ಅವಧಾನಿ ಗಣೇಶ ಕೊಪ್ಪಲತೋಟ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪ್ರಚ್ಛಕರಾಗಿ ವಿದ್ವಾಂಸರಾದ ರಾಜಶೇಖರ ಧೂಳಿ, ವಿಘ್ನೇಶ್ವರ ಭಟ್ಟ ಬಿಸಗೋಡ್, ಮಹೇಶ ಭಟ್ಟ ಇಡಗುಂದಿ, ನರಸಿಂಹ ಭಟ್ಟ ಕವಡಿಕೆರೆ, ಗಣಪತಿ ಭಟ್ಟ ಕೋಲಿಬೇಣ, ತಿಮ್ಮಣ್ಣ ಭಟ್ಟ ಬೆಂಗಳೂರು, ವೆಂಕಟ್ರಮಣ ಭಟ್ಟ ಚಂದ್ಗುಳಿ, ಪೂರ್ಣಿಮಾ ಉಪಾಧ್ಯಾಯ ಭಾಗವಹಿಸಲಿದ್ದಾರೆ. ಕೋವಿಡ್ ನಿಯಮಾವಳಿಗಳಿಗೆ ಒಳಪಟ್ಟು ಕಾರ್ಯಕ್ರಮದಲ್ಲಿ…

Read More

ಬಿ.ಇಡಿ ಫಲಿತಾಂಶ: ಶೇ.100ರ ಸಾಧನೆ ಮಾಡಿದ ವಿಶ್ವದರ್ಶನ

ಯಲ್ಲಾಪುರ: ಬಿ.ಇಡಿ ಎರಡನೇ ವರ್ಷದ 3ನೇ ಸೆಮಿಸ್ಟರ್ ಹಾಗೂ ಪ್ರಥಮ ವರ್ಷದ ಮೊದಲನೇ ಸಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವಿಶ್ವದರ್ಶನ ಶಿಕ್ಷಣ ಸಂಸ್ಥೆ ಶೇ.100ರ ಸಾಧನೆ ಮಾಡಿದೆ. ಎರಡನೇ ವರ್ಷದ 3ನೇ ಸಮಿಸ್ಟರ್ ಪರೀಕ್ಷೆಗೆ 94 ವಿದ್ಯಾರ್ಥಿಗಳು ಹಾಜರಾಗಿದ್ದರು. ಪ್ರಥಮ ವರ್ಷದ ಮೊದಲನೇ ಸಮಿಸ್ಟರ್ ಗೆ 100 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಮಹೇಶ ಭಟ್ಟ 524 ಅಂಕ ಪಡೆದು ಶೇ.87.33, ಹಫಿಜಾಬಿ ಶೇಖ್ 523 ಅಂಕ ಪಡೆದು…

Read More

ಸಿಬಿಎಸ್‌ಇಯಿಂದ ಪದ್ದತಿಯಿಂದ ಮೌಲ್ಯಾಧಾರಿತ ಶಿಕ್ಷಣ ಸಾಧ್ಯ

ಯಲ್ಲಾಪುರ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಒದಗಿಸುವ ಅಗತ್ಯವಿದೆ ಎಂದು ಬೆಳಗಾವಿಯ ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ಪ್ರಾದ್ಯಾಪಕರಾದ ಪ್ರೋ. ಪ್ರವೀಣ ಚಿಂದಲಕರ್ ಹೇಳಿದರು.     ಅವರು ಶುಕ್ರವಾರ ನಾಯ್ಕನರೆಯ ಶಾರದಾಂಬಾ ದೇವಿಯ ಸನ್ನಿಧಿಯಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಸಿಬಿಎಸ್‌ಇ ಪಠ್ಯಕ್ರಮದ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಮಾತನಾಡಿದರು.   ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸಿಬಿಎಸ್‌ಇ ಪಠ್ಯಕ್ರಮ ಆಧಾರಿತ ಶಿಕ್ಷಣ ಸಹಾಯಕವಾಗಿದೆ. ಸಿಬಿಎಸ್‌ಇ ಪದ್ದತಿಯಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಲಾಗುತ್ತದೆ. ರಾಜ್ಯ ಪಠ್ಯಕ್ರಮ ಅದ್ಯಯನ ನಡೆಸುತ್ತಿರುವ…

Read More

ಗಮನ ಸೆಳೆದ ರಂಗೋಲಿಯಲ್ಲಿ ಭಾರತ

ಯಲ್ಲಾಪುರ: ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ನಡೆದ “ರಂಗೋಲಿಯಲ್ಲಿ ಭಾರತ ನಕ್ಷೆ ಬಿಡಿಸುವ ಸ್ಪರ್ಧೆ” ಗಮನ ಸೆಳೆಯಿತು.  ರಂಗೋಲಿ ಪುಡಿಯ ಜೊತೆ ಅಕ್ಕಿ, ಗೋದಿ ಮೊದಲಾದ ಧಾನ್ಯಗಳನ್ನು ಬಳಸಿ ಮಕ್ಕಳು ಚಿತ್ರ ಬಿಡಿದರು. ನಂತರ ಸೂಚಿಸಲಾದ ಸ್ಥಳಗಳನ್ನು ಗುರುತು ಮಾಡಿದರು. ಸಮಾಜ ವಿಜ್ಞಾನ ಶಿಕ್ಷಕ ರಾಘವೇಂದ್ರ ಹೆಗಡೆ ಸ್ಪರ್ಧೆಯನ್ನು ನಡೆಸಿಕೊಟ್ಟರು. ೧೦ನೇ ತರಗತಿ ಪರೀಕ್ಷೆಗೆ ಪೂರಕವಾದ ಸ್ಪರ್ಧೆ ಇದಾಗಿದೆ. ಈ ಸ್ಪರ್ಧೆಯಲ್ಲಿ ಲಕ್ಷಿ ಕೃಷ್ಣ ಪಟಗಾರ ಪ್ರಥಮ, ಸಮೀಕ್ಷಾ ಸುರೇಶ ಮಹಾಲೆ ದ್ವಿತೀಯ, ಮೇಘಾ ವಿಶ್ವನಾಥ ಪಟಗಾರ ಹಾಗೂ…

Read More

ಮಕ್ಕಳ ಕೋವಿಡ್ ಲಸಿಕೆ ಕುರಿತು ಭಯ ಬೇಡ

ಯಲ್ಲಾಪುರ: ರೂಪಾಂತರಿ ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಈ ರೋಗದ ಕುರಿತು ಯಾರೂ ನಿರ್ಲಕ್ಷ ಮಾಡುವಂತಿಲ್ಲ. ಕೋವಿಡ್ ತಡೆಗೆ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದ್ದು ಸಾರ್ವಜನಿಕರು ಸಹಕರಿಸಬೇಕಿದೆ ಎಂದು ವಜ್ರಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಸುರೇಶ ಹಂಜಗಿ ಮನವಿ ಮಾಡಿದರು.    ಅವರು ಸೋಮವಾರ ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡ ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.   ಕೊರೊನಾ ವಿರುದ್ಧ ಹೋರಾಡಲು ಅನೇಕರು ದುಡಿಯುತ್ತಿದ್ದಾರೆ. ಆದಷ್ಟು ಬೇಗ ಕೊರೊನಾ…

Read More